Thursday, June 4, 2026
Homeಕರಾವಳಿಮಂಗಳೂರುಮಾಜಿ ಶಾಸಕ ವಸಂತ ಬಂಗೇರ ಅಂತ್ಯಕ್ರಿಯೆ; ಪುತ್ರಿಯಿಂದ ಚಿತೆಗೆ ಅಗ್ನಿ ಸ್ಪರ್ಶ

ಮಾಜಿ ಶಾಸಕ ವಸಂತ ಬಂಗೇರ ಅಂತ್ಯಕ್ರಿಯೆ; ಪುತ್ರಿಯಿಂದ ಚಿತೆಗೆ ಅಗ್ನಿ ಸ್ಪರ್ಶ

- Advertisement -
- Advertisement -

ಬೆಳ್ತಂಗಡಿ: ನಿನ್ನೆ ನಿಧನರಾದ ಮಾಜಿ ಶಾಸಕ ವಸಂತ ಬಂಗೇರ ಅವರ ಅಂತ್ಯ ಸಂಸ್ಕಾರ ಇಂದು ನಡೆಯಿತು.ವಸಂತ ಬಂಗೇರ ಅವರು ಜನಿಸಿದ್ದ ಕುವೆಟ್ಟು ಗ್ರಾಮದ ಕೇದೆ ಹೊಸ ಮನೆಯ ಬಳಿ ಬಿಲ್ಲವ ಸಮುದಾಯದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ವಸಂತ ಬಂಗೇರ ಅವರ ಎರಡನೇ ಪುತ್ರಿ ಬಬಿತಾ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ಅಂತ್ಯಕ್ರಿಯೆಗೂ ಮೊದಲು ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಂಸದ ನಳೀನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಸೇರಿದಂತೆ ಹಲವು ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಮೂರು ಸುತ್ತು ಕುಶಾಲ ತೋಪು ಹಾರಿಸಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಡಿಸಿ, ಎಸ್ಪಿ ಮತ್ತು ಎಸಿ ಉಪಸ್ಥಿತರಿದ್ದರು

- Advertisement -

Latest News

error: Content is protected !!