Tuesday, May 14, 2024
Homeತಾಜಾ ಸುದ್ದಿಕಿಕ್ ಬಾಕ್ಸಿಂಗ್‌ ವೇಳೆ ಎದುರಾಳಿ ಏಟಿಗೆ ಯುವ ಬಾಕ್ಸರ್ ಸಾವು

ಕಿಕ್ ಬಾಕ್ಸಿಂಗ್‌ ವೇಳೆ ಎದುರಾಳಿ ಏಟಿಗೆ ಯುವ ಬಾಕ್ಸರ್ ಸಾವು

spot_img
- Advertisement -
- Advertisement -

ಬೆಂಗಳೂರು: ಕಿಕ್ ಬಾಕ್ಸಿಂಗ್ ಸ್ಪರ್ಧೆ ವೇಳೆ ಎದುರಾಳಿಯ ಏಟಿಗೆ ಯುವ ಕಿಕ್ ಬಾಕ್ಸರ್ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಿಖಿಲ್‌ ಮೃತಪಟ್ಟ ಕಿಕ್‌ ಬಾಕ್ಸರ್.

ಬೆಂಗಳೂರಿನ ಕೆಂಗೇರಿ A-1 ಕಿಕ್ ಬಾಕ್ಸರ್ ಆರ್ಗನೈಸೇಷನ್ ವತಿಯಿಂದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ವೇಳೆ ರಿಂಗ್‌ನಲ್ಲಿ ಸೆಣೆಸಾಡುತ್ತಿದ್ದಂತೆ ಎದುರಾಳಿಯ ಏಟಿಗೆ ನಿಖಿಲ್ ಗಂಭೀರ ಗಾಯಗೊಂಡಿದ್ದರು.

ಕೂಡಲೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಕೋಮಾದಲ್ಲಿದ್ದ ನಿಖಿಲ್‌ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ‌.

- Advertisement -
spot_img

Latest News

error: Content is protected !!