Friday, June 5, 2026
Homeಕರಾವಳಿಮೇ 8ರಂದು ಮಂಗಳೂರು ಆಕಾಶವಾಣಿಯಲ್ಲಿ ‘ಸುದರ್ಶನ ಕರ ಗ್ರಹಣ’ ಯಕ್ಷಗಾನ ತಾಳಮದ್ದಳೆ ಪ್ರಸಾರ

ಮೇ 8ರಂದು ಮಂಗಳೂರು ಆಕಾಶವಾಣಿಯಲ್ಲಿ ‘ಸುದರ್ಶನ ಕರ ಗ್ರಹಣ’ ಯಕ್ಷಗಾನ ತಾಳಮದ್ದಳೆ ಪ್ರಸಾರ

- Advertisement -
- Advertisement -

ಬೆಳ್ತಂಗಡಿ: ಧರ್ಮಸ್ಥಳ ಬಿ.ಭುಜಬಲಿ ಅವರ ನಿರ್ದೇಶನದಲ್ಲಿ “ಸುದರ್ಶನ ಕರ ಗ್ರಹಣ” ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆಯು ಮಂಗಳೂರು ಆಕಾಶವಾಣಿಯಲ್ಲಿ ಶುಕ್ರವಾರ (ಮೇ 8)ದಂದು ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.

ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ದಿನೇಶ್ ಅಮ್ಮಣ್ಣಾಯ, ಮದ್ದಳೆಯಲ್ಲಿ ಜನಾರ್ದನ ತೋಳ್ಪಡಿತ್ತಾಯ, ಚೆಂಡೆಯಲ್ಲಿ ಸೀತಾರಾಮ ತೋಳ್ಪಡಿತ್ತಾಯ, ಶೃತಿಯಲ್ಲಿ ಭುಜಬಲಿ ಧರ್ಮಸ್ಥಳ ಇರಲಿದ್ದಾರೆ.

ಪಾತ್ರವರ್ಗದಲ್ಲಿ ಕೌರವ ಪಾತ್ರದಲ್ಲಿ ನಿಡ್ಲೆ ಗೋವಿಂದಭಟ್, ಕರ್ಣನ ಪಾತ್ರದಲ್ಲಿ ಡಿ.ಮನೋಹರ ಕುಮಾರ್, ದ್ರೋಣರಾಗಿ ಬಂಟ್ವಾಳ ಜಯರಾಮ ಆಚಾರ್ಯ, ಭೀಷ್ಮರಾಗಿ ಉಜಿರೆ ಅಶೋಕ ಭಟ್, ಅರ್ಜುನನ ಪಾತ್ರದಲ್ಲಿ ಈಶ್ವರ ಪ್ರಸಾದ್, ಅಭಿಮನ್ಯುವಿನ ಪಾತ್ರದಲ್ಲಿ ಜನಾರ್ದನ ಗುಡಿಗಾರ, ಕೃಷ್ಣನ ಪಾತ್ರದಲ್ಲಿ ಬೇಗಾರು ಶಿವಕುಮಾರ್ ನಿರ್ವಹಿಸಲಿದ್ದಾರೆ.

- Advertisement -

Latest News

error: Content is protected !!