Tuesday, April 30, 2024
Homeಕರಾವಳಿಮಂಗಳೂರು: ಕಾಡಿನಿಂದ ನಾಡಿಗೆ ನುಗ್ಗಿ ಪ್ರಾಣ ಬಿಟ್ಟಿದ್ದ ಕಾಡುಕೋಣದ ಶವ ನಿಡಿಗಲ್ ಅರಣ್ಯದಲ್ಲಿ ದಹನ

ಮಂಗಳೂರು: ಕಾಡಿನಿಂದ ನಾಡಿಗೆ ನುಗ್ಗಿ ಪ್ರಾಣ ಬಿಟ್ಟಿದ್ದ ಕಾಡುಕೋಣದ ಶವ ನಿಡಿಗಲ್ ಅರಣ್ಯದಲ್ಲಿ ದಹನ

spot_img
- Advertisement -
- Advertisement -

ಉಜಿರೆ: ಮಂಗಳೂರಿನಲ್ಲಿ‌‌ ನೆನ್ನೆ ಬೆಳಿಗ್ಗೆ ಕಾಡಿನಿಂದ ನಾಡಿಗೆ ಬಂದು ರದ್ದಾಂತ ಸೃಷ್ಡಿಸಿದ್ದ ಕಾಡುಕೋಣ ಬಳಿಕ ಆಕಸ್ಮಿಕ ಮರಣಕ್ಕೊಳಗಾಗಿದ್ದು ಅದರ ಕಳೇಬರದ ದಹನ ಪ್ರಕ್ರಿಯೆ ಕಲ್ಮಂಜ ಗ್ರಾಮದ ನಿಡಿಗಲ್ ಅರಣ್ಯದಲ್ಲಿ ನಡೆಸಲಾಗಿದೆ.

ಮಂಗಳೂರಿನಲ್ಲಿ‌ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದ್ದ ಕಾಡುಕೋಣವನ್ನು ಸುರಕ್ಷಿತವಾಗಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟುಬರಲು ಕರೆತರಲಾಗುತ್ತು.

ಆದರೆ ಸತತ ನಾಲ್ಕು ಗಂಟೆ ಓಡಾಟ ಮಾಡಿ‌ಬಸವಳಿದಿದ್ದ ಕಾಡು ಕೋಣ ಚಾರ್ಮಾಡಿ ತಲುಪುತ್ತಿದ್ದಂತೆ ಹೃದಯ ಸ್ತಂಭನಗೊಂಡು ಕುಸಿದುಬಿದ್ದು ಕೊನೆಯುಸಿರೆಳೆದಿತ್ತು. ಬಳಿಕ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಮರಣೋತ್ತರ ಪರೀಕ್ಷೆ ಕೈಗೊಂಡು ನಿಡಿಗಲ್‌ ಅರಣ್ಯ ಪ್ರದೇಶದಲ್ಲಿ ‌ದಹನ‌ ಕಾರ್ಯ ನಡೆಯಿತು.

ಮಂಗಳೂರು: ಮನೆಯೊಳಗೆ ಜನ, ಬೀದಿಯಲ್ಲಿ ಕಾಡುಕೋಣ !

Posted by Maha Xpress on Monday, 4 May 2020

ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿ ಸುಬ್ಬಯ್ಯ ನಾಯ್ಕ್ ಮತ್ತು ಸಿಬಂದಿಗಳು, ಮಂಗಳೂರು ಅರಣ್ಯ ಇಲಾಖೆಯ ಸಿಬಂದಿಗಳು ಜೊತೆಯಾಗಿ ಕಾರ್ಯಾಚರಣೆ ನಡೆಸಿದರು

- Advertisement -
spot_img

Latest News

error: Content is protected !!