- Advertisement -
- Advertisement -
ಮಂಗಳೂರು: ದೇಶಾದ್ಯಂತ ಲಾಕ್‌ಡೌನ್ ಇರುವ ಹಿನ್ನೆಲೆಯಲ್ಲಿ, ಜನರು ಯಾರೂ ಕೂಡಾ ಮನೆಯಿಂದ ಹೊರಗೆ ಹೆಚ್ಚಾಗಿ ಬರುತ್ತಿಲ್ಲ. ಹೀಗಾಗಿ, ಕಾಡು ಪ್ರಾಣಿಗಳು ನಾಡಿಗೆ ಬಂದು ಬಿಂದಾಸ್ ಆಗಿ ರೌಂಡ್ಸ್ ಹಾಕುತ್ತಿವೆ.
ಆದರೆ ಮಂಗಳೂರಿನಲ್ಲಿ ಕಾಡು ಪ್ರಾಣಿಗಳ ಈ ಬಿಂದಾಸ್ ಓಡಾಟ ಮಾನವನ ಜೀವಕ್ಕೇ ಕುತ್ತು ತರುವ ಮಟ್ಟಕ್ಕೆ ಬಂದು ನಿಂತಿದೆ. ಏಕೆಂದರೆ ಇಂದು ಬೆಳ್ಳಂ ಬೆಳಿಗ್ಗೆ ನಗರದ ಹೃದಯಭಾಗ `ಕೊಡಿಯಾಲ್ ಬೈಲ್, ಅಳಕೆ ಮತ್ತು ಬಿಜೈ ಪರಿಸರದಲ್ಲಿ ಕಾಡುಕೋಣವೊಂದು ಪ್ರತ್ಯಕ್ಷವಾಗಿದೆ.
ಕಾಡುಕೋಣ ಕಂಡ ಸ್ಥಳೀಯರಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಕಾಡು ಕೋಣ ಹಿಡಿಯುವ ಕಾರ್ಯಾಚರಣೆಯನ್ನು ಶುರುಮಾಡಿದ್ದಾರೆ. ಬಜ್ಪೆ, ಅದ್ಯಪಾಡಿ ಅರಣ್ಯ ಪ್ರದೇಶದ ಸುತ್ತಮುತ್ತ ಕಾಡುಕೋಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಅಲ್ಲಿಂದ ಬಂದಿರುವ ಸಾಧ್ಯತೆ ಇರಬಹುದೆಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗಿದೆ.
- Advertisement -