ಅಸ್ತಮಾ ರೋಗ ಇಂದು ಹೆಚ್ಚು ವ್ಯಾಪಕವಾಗಿದ್ದು ಭಾರತದಲ್ಲಿ ಪ್ರತಿ ಹತ್ತು ಜನರಲ್ಲಿ ಒಬ್ಬರಿಗಾದರೂ ಅಸ್ತಮಾ ಇದೆ. ವೈದ್ಯಕೀಯ ಭಾಷೆಯಲ್ಲಿ ಅಸ್ತಮಾಟಿಕ್ ಬ್ರಾಂಖೈಟಿಸ್ (Asthmatic Bronchitis)ಎಂದು ಕರೆಯುತ್ತಾರೆ. ಬ್ರಾಂಕೈಟಿಸ್ ಎಂದರೆ ಶ್ವಾಸನಾಳಗಳಾದ ಬ್ರಾಂಖಿಯಲ್ ನಾಳಗಳಿಗೆ ಆಗಿರುವ ತೊಂದರೆ ಎಂದು ಅರ್ಥ. ಇದು ಮಾರಕವಲ್ಲದಿದ್ದರೂ ಸೂಕ್ತ ಆರೈಕೆ, ಮಾಹಿತಿ ಮತ್ತು ಔಷಧಿಗಳ ಕೊರತೆಯಿಂದ ಜನರು ಅಸ್ತಮಾ ಆಘಾತಕ್ಕೆ ಒಳಗಾಗುತ್ತಾರೆ. ಒಂದು ವೇಳೆ ಅಗತ್ಯವಿರುವಷ್ಟು ಆಮ್ಲಜನಕ ಪೂರೈಸಲು ಸಾಧ್ಯವಾಗದೇ ಹೆಚ್ಚು ಒತ್ತಡ ಹೇರುವಾಗ ಈಗಾಗಲೇ ಸಂಕುಚಿತಗೊಂಡಿದ್ದ ಶ್ವಾಸನಾಳಗಳು ಇನ್ನಷ್ಟು ಸಂಕುಚಿತಗೊಳ್ಳುತ್ತಾ ಮುಚ್ಚಿಯೇ ಹೋಗಿ ಆಮ್ಲಜನಕ ನೀಡಲು ಸಾಧ್ಯವಾಗದೇ ಸ್ಥಗಿತಗೊಂಡು ಎದುರಾಗುವ ಸಾಗಿವೆ ಅಸ್ತಮಾಘಾತ (asthama attack)ಎಂದು ಕರೆಯುತ್ತಾರೆ.
ಅಸ್ತಮಾದಿಂದ ಮಕ್ಕಳನ್ನು ರಕ್ಷಿಸೋದು ಹೇಗೆ ?
ಬಾದಾಮಿ, ಮೀನು ಹಾಗೂ ಸೋಯಾಬೀನ್ ತೈಲದಲ್ಲಿ ಪಾಲಿಅನ್ಸಾಚುರೇಟೆಡ್ ಕೊಬ್ಬಿನ ಆಮ್ಲವಿರುತ್ತದೆ. ಇದು ಮಕ್ಕಳಿಗೆ ಬಹಳ ಪ್ರಯೋಜನಕಾರಿ. ಇದ್ರ ಸೇವನೆಯಿಂದ ಮಕ್ಕಳಿಗೆ ಅಲರ್ಜಿಯಂತಹ ಯಾವುದೇ ಕಾಯಿಲೆ ಕಾಡುವುದಿಲ್ಲ. ವಿಶೇಷವಾಗಿ ಅಸ್ತಮಾ, ಮೂಗಿನ ಉರಿ ಹಾಗೂ ತುರಿಕೆಯಂತ ಸಮಸ್ಯೆ ಕಾಡುವುದಿಲ್ಲ.
ಸಂಶೋಧನೆಯೊಂದರ ಪ್ರಕಾರ, ಪಾಲಿಅನ್ಸಾಚುರೇಟೆಡ್ ಕೊಬ್ಬಿನ ಆಮ್ಲ ಅಲರ್ಜಿ ವಿರುದ್ಧ ಮಕ್ಕಳು ಹೋರಾಡಲು ನೆರವಾಗುತ್ತದೆ. ಪಾಲಿಅನ್ಸಾಚುರೇಟೆಡ್ ಕೊಬ್ಬಿನ ಆಮ್ಲದಲ್ಲಿ ಒಮೇಗಾ-3 ಮತ್ತು ಒಮೇಗಾ 6 ಕೊಬ್ಬಿನಾಂಶವಿರುತ್ತದೆ. ಇದನ್ನು ಆರ್ಕಿಡೋನಿಕ್ ಆಯಸಿಡ್ ಎಂದು ಕರೆಯುತ್ತಾರೆ.
8ನೇ ವಯಸ್ಸಿನ ಮಕ್ಕಳ ರಕ್ತದಲ್ಲಿ ಒಮೆಗಾ-3 ಅಧಿಕ ಮಟ್ಟದಲ್ಲಿದ್ದರೆ ಅವರಿಗೆ 16ನೇ ವಯಸ್ಸಿನಲ್ಲಿ ಅಸ್ತಮಾ ಸೇರಿದಂತೆ ಮೂಗಿನ ಕಿರಿಕಿರಿ ಕಾಡುವುದಿಲ್ಲ. ಸಾಮಾನ್ಯವಾಗಿ ಮಕ್ಕಳಿಗೆ ಅಲರ್ಜಿ ಸಮಸ್ಯೆ ಸಣ್ಣ ವಯಸ್ಸಿನಲ್ಲಿಯೇ ಕಾಡಲು ಶುರುವಾಗುತ್ತದೆಯಂತೆ.
ಅಸ್ತಮಾ ಖಾಯಿಲೆ ದೂರ ಮಾಡುತ್ತೆ ಮೀನಿನ ʼಪ್ರಸಾದʼ
ಹೈದ್ರಾಬಾದ್ ನಲ್ಲಿ ಅಸ್ತಮಾ ಖಾಯಿಲೆಗೆ ವಿಶಿಷ್ಟ ಮದ್ದಿದೆ. ಪ್ರತಿಬಾರಿ ಮೃಗಶಿರ ಕಾರ್ತಿ ಸಂದರ್ಭದಲ್ಲಿ ವಿಶೇಷ ಮೀನಿನ ಪ್ರಸಾದವನ್ನು ವಿತರಿಸಲಾಗುತ್ತದೆ. ಇದನ್ನು ಸೇವಿಸಿದ್ರೆ ಅಸ್ತಮಾ ರೋಗ ಸಂಪೂರ್ಣ ಗುಣವಾಗುತ್ತದೆ ಎಂಬ ನಂಬಿಕೆ ಇದೆ. ಬತ್ತನಿ ಕುಟುಂಬದವರು ಕಳೆದ 172 ವರ್ಷಗಳಿಂದ ಈ ಪ್ರಸಾದವನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ.
ದೇಶದ ದೂರ ದೂರದ ಪ್ರದೇಶಗಳಿಂದ್ಲೂ ಅಸ್ತಮಾ ರೋಗಿಗಳು ಪ್ರಸಾದ ಸ್ವೀಕರಿಸಲು ಬರುತ್ತಾರೆ. ಮೊದಲ ಬಾರಿ ಪ್ರಸಾದ ಸೇವಿಸಿದ ಮೇಲೆ ಖಾಯಿಲೆ ಸ್ವಲ್ಪ ಮಟ್ಟಿಗೆ ವಾಸಿಯಾಗಿದೆ ಎನಿಸಿದವರೆಲ್ಲ ಮತ್ತೆ ಮತ್ತೆ ಬರುತ್ತಿರುತ್ತಾರೆ.
ಇನ್ನು ಕೆಲವರು ಈ ಮೀನಿನ ಪ್ರಸಾದದ ಚಮತ್ಕಾರದ ಬಗ್ಗೆ ಕೇಳಿ ತಿಳಿದುಕೊಂಡು, ಅದರ ಅನುಭವ ಪಡೆಯಲೆಂದೇ ಬರುತ್ತಾರೆ. ಆದ್ರೆ ಎಂಥೆಂಥಾ ಔಷಧಗಳಿಂದ್ಲೂ ಗುಣವಾಗದ ಅಸ್ತಮಾ, ಕೇವಲ ಒಂದು ಪ್ರಸಾದದಿಂದ ಕಡಿಮೆಯಾಗೋದು ನಿಜಕ್ಕೂ ಪವಾಡ ಎನ್ನುತ್ತಾರೆ ಜನ.