- Advertisement -
- Advertisement -
ನವದೆಹಲಿ : ದೆಹಲಿ ಸರ್ಕಾರವು ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮೌಲ್ಯ ವರ್ಧಿತ ತೆರಿಗೆ ಹೆಚ್ಚಿಸಿದ್ದು, ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್ ಗೆ 7.1 ರೂ. ಪೆಟ್ರೋಲ್ ಬೆಲೆ 1.67 ರೂ. ಹೆಚ್ಚಳವಾಗಿದೆ.
ದೆಹಲಿ ಸರ್ಕಾರ ವ್ಯಾಟ್ ಹೇರಿಕೆಯಿಂದಾಗಿ ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 71.26 ರೂ. ತಲುಪಿದ್ದು, ಡೀಸೆಲ್ ಬೆಲೆ 69.39 ರೂ.ಗೆ ಏರಿಕೆಯಾಗಿದೆ. ಇದು ದೆಹಲಿಯಲ್ಲಿ ಮಾತ್ರ ವ್ಯಾಟ್ ಹೆಚ್ಚಳದಿಂದ ಆಗಿರುವ ಬದಲಾವಣೆ ದೇಶದ ಬೇರೆಡೆ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಅಗಿಲ್ಲ.
ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೆ ವ್ಯತ್ಯಾಸ ಕಂಡುಬಂದಿಲ್ಲ. ಪೆಟ್ರೋಲ್ ಬೆಲೆ 73.55 ರೂ. ಡೀಸೆಲ್ ಬೆಲೆ 65.96 ರೂ.ಇದೆ.
- Advertisement -