- Advertisement -
- Advertisement -
ಬಂಟ್ವಾಳ : ಇಡೀ ವಿಶ್ವವೇ ಕೊರೊನ ಮಹಾಮಾರಿಗೆ ತತ್ತರಿಸಿರುವ ಈ ಸಂಧರ್ಭದಲ್ಲಿ , ಯುವಶಕ್ತಿ ಕಡೇಶಿವಾಲಯ (ರಿ) ಮತ್ತು ದಾನಿಗಳ ಸಹಕಾರದೊಂದಿಗೆ 22 ಕ್ವಿಂಟಾಲ್ ಅಕ್ಕಿ ಹಾಗೂ ಇತರ ದಿನಬಳಕೆಯ ಸಾಮಾಗ್ರಿಗಳನ್ನು ಒಳಗೊಂಡ ಕಿಟ್ ಅನ್ನು ಲಾಕ್ ಡೌನ್ ಸಮಸ್ಯೆಯಿಂದ ಕಂಗೆಟ್ಟಿರುವ ಗ್ರಾಮದ ಅರ್ಹ ಕುಟುಂಬಗಳಿಗೆ ವಿತರಿಸಲಾಯಿತು.
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಅವರು ಗಣ್ಯರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಚಾಲನೆ ನೀಡಿದರು . ವೈಯ್ಯಕ್ತಿಕವಾಗಿ ಶಾಸಕರ ಕಡೆಯಿಂದ 2 ಕ್ವಿಂಟಾಲ್ ಅಕ್ಕಿ ಈ ಪುಣ್ಯ ಕಾರ್ಯಕ್ಕೆ ಕೊಡುಗೆಯಾಗಿ ನೀಡಿದರು .
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ವಿಧ್ಯಾಧರ್ ರೈ , ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೇಂಗದಡಿ ,ಕಾರ್ಯದರ್ಶಿ ಸುರೇಶ್ ಬನಾರಿ , ಮಾರ್ಗದರ್ಶಕರಾದ ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು , ಗ್ರಾಮ ಪಂಚಾಯತ್ ಅಧ್ಯಕ್ಷರು , ಸದಸ್ಯರು ಮತ್ತು ಊರವರು ಉಪಸ್ಥಿತರಿದ್ದರು..
- Advertisement -