ನಟಿ ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಏನಾದರು ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈ ಬಾರಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಅಡುಗೆ ಮನೆಗೆ ತರಕಾರಿ ಕಟ್ ಮಾಡಲು ಹೋಗಿದ್ದ ಸನ್ನಿ ಲಿಯೋನ್ ಗೊತ್ತಲ್ಲದೆ ತಮ್ಮ ಕೈಬೆರಳನ್ನು ಕತ್ತರಿಸಿಕೊಳ್ಳುತ್ತಾರೆ. ನಂತರ ಗಾಬರಿಯಿಂದ ಜೋರಾಗಿ ಪತಿ ಡೇನಿಯಲ್ರನ್ನು ಕರೆಯುತ್ತಾರೆ. ಸನ್ನಿ ಮೇಲೂಧ್ವನಿಗೆ ಓಡಿ ಬಂದ ಡೇನಿಯಲ್ ಬಟ್ಟೆ ಸುತ್ತಿ ಆಸ್ಪತ್ರೆಗೆ ಹೋಗುವಂತೆ ಒತ್ತಾಯಿಸಿದ್ದಾರೆ. ಆಗಲೇ ನೋಡಿ ಸನ್ನಿ ಲಿಯೋನ್ ಅಸಲಿ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಪತಿ ಡೇನಿಯಲ್ ಪ್ರ್ಯಾಂಕ್ ಮಾಡಲು ಹಿಗೋಂದು ವಿಡಿಯೋ ಮಾಡಿದ್ದಾರೆ.
ನಂತರ ಡೇನಿಯಲ್ ಬಳಿ ಸನ್ನಿ ಲಿಯೋನ್ ಹೇಗಿತ್ತು ಫ್ರಾಂಕ್ ವಿಡಿಯೋ ಎಂದು ಕೇಳಿದ್ದಾರೆ. ಆದಕ್ಕೆ ಉತ್ತರಿಸಿದ ಡೇನಿಯಲ್ ‘ನನಗೆ ಪ್ರ್ಯಾಂಕ್ಗಳೆಂದರೆ ಇಷ್ಟವಿಲ್ಲ, ನಾನು ಗಂಭೀರ ಸ್ವಭಾವದವನು. ನಾನು ಬೇರೆಯವರಿಗೆ ಪ್ರ್ಯಾಂಕ್ಮಾಡುವುದಾಗಲಿ ಅಥವಾ ನನ್ನ ಮೇಲೆ ಪ್ರಯೋಗ ಮಾಡುವುದಾಗಲಿ ಇಷ್ಟವಾಗುವುದಿಲ್ಲ. ಹಾಗಾಗಿ ನೀನು ಮಾಡಿದ ಈ ವಿಡಿಯೋಗೆ ನಾನು ರೇಟಿಂಗ್ ಕೊಡುವುದಿಲ್ಲ. ನನಗನಿಸಿದ ಮಟ್ಟಿಗೆ ನಿನ್ನ ಈ ಕೆಲಸ ಜೀರೋ’ ಎಂದು ಡೇನಿಯಲ್ ಹೇಳಿದ್ದಾರಂತೆ.
ಇನ್ನು ಸನ್ಮಿ ಲಿಯೋನ್ ಲೈವ್ ಚಾಟ್ ವೇಳೆ ಡೇನಿಯಲ್ಗೆ ಪ್ರ್ಯಾಂಕ್ ಮಾಡುವುದಾಗಿ ಅಭಿಮಾನಿಗಳ ಜತೆಗೆ ಹೇಳಿದ್ದರಂತೆ. ಆದರೆ ಈ ಮಾತನ್ನು ಡೇನಿಯಲ್ ಸರಿಯಾಗಿ ಕೇಳಿಸಿಕೊಂಡಿರಲಿಲ್ಲ. ಲೈವ್ ಮುಗಿಯುತ್ತಿದ್ದಂತೆ ಸನ್ನಿ ಲಿಯೋನ್ ರಕ್ತವನ್ನು ಹೋಲುವ ಕೆಂಪು ಬಣ್ಣವನ್ನು ಬೆರಳ ಮೇಲೆ ಸುರಿಸಿಕೊಂಡು ಪ್ರ್ಯಾಂಕ್ ಮಾಡಿದ್ದಾರೆ.