Saturday, June 6, 2026
Homeಕರಾವಳಿಬೆಳ್ತಂಗಡಿ: ಲಾಕ್ ಡೌನ್ ನಿಂದಾಗಿ ಸರಳ ರೀತಿಯಿಂದ ಲಕ್ಷ್ಮೀ ನರಸಿಂಹ ಉತ್ಸವ ಆಚರಣೆ

ಬೆಳ್ತಂಗಡಿ: ಲಾಕ್ ಡೌನ್ ನಿಂದಾಗಿ ಸರಳ ರೀತಿಯಿಂದ ಲಕ್ಷ್ಮೀ ನರಸಿಂಹ ಉತ್ಸವ ಆಚರಣೆ

- Advertisement -
- Advertisement -

ನಡ: ನರಸಿಂಹ ಜಯಂತಿ‌ ಪ್ರಯುಕ್ತ ನಡ ಗ್ರಾಮದ ನರಸಿಂಹಗಡದಲ್ಲಿ (ಗಡಾಯಿಕಲ್ಲು) ಲಕ್ಷ್ಮೀ ನರಸಿಂಹ ಉತ್ಸವವನ್ನು ಲಾಕ್ ಡೌನ್ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅತ್ಯಂತ ಸರಳವಾಗಿ ಆಚರಿಸಲಾಯಿತು.

ಬೆಳ್ತಂಗಡಿ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನ ದಿಂದ ತೀರ್ಥವನ್ನು ತೆಗೆದುಕೊಂಡು ಹೋಗಿ ಲಕ್ಷ್ಮೀ ನರಸಿಂಹ ಭಜನಾ ಮಂದಿರದಲ್ಲಿ ಪೂಜೆಯ ನಂತರ ನರಸಿಂಹಗಡ ಬುಡದಲ್ಲಿ ನೆಲೆಸಿರುವ ಕರಿಯಮಲ್ಲವ ದೈವಕ್ಕೆ ಪರ್ವ ಸೇವೆಯನ್ನು ಪ್ರತೀ ವರ್ಷದಂತೆ ಈ ವರ್ಷವೂ ನಡೆಸಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ತಾಲೂಕು ಪದಾಧಿಕಾರಿಗಳು, ಗ್ರಾಮ ಸಮಿತಿ ಪದಾದಿಕಾರಿಗಳು ಹಾಗೂ ನಗರ ಪಂಚಾಯತ್ ಸದಸ್ಯ ಅಂಬರೀಷ್ ಅವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!