Wednesday, June 3, 2026
Homeಉದ್ಯಮಐಟಿ ಉದ್ಯೋಗಿಗಳ ಗಮನಕ್ಕೆ: ಡಿಸೆಂಬರ್ 31 ವರೆಗೆ ವರ್ಕ್ ಫ್ರಮ್ ಹೋಮ್ ವಿಸ್ತರಣೆ

ಐಟಿ ಉದ್ಯೋಗಿಗಳ ಗಮನಕ್ಕೆ: ಡಿಸೆಂಬರ್ 31 ವರೆಗೆ ವರ್ಕ್ ಫ್ರಮ್ ಹೋಮ್ ವಿಸ್ತರಣೆ

- Advertisement -
- Advertisement -

ನವದೆಹಲಿ: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಐಟಿ ಕ್ಷೇತ್ರದಲ್ಲಿರುವವರಿಗೆ ವರ್ಕ್ ಫ್ರಮ್ ಹೋಮ್ ಸೌಲಭ್ಯವನ್ನು ಡಿ.31 ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಈ ವರೆಗೂ ಜು.31 ವರೆಗೆ ಐಟಿ ಹಾಗೂ ಬಿಪಿಒ ಸಂಸ್ಥೆಗಳ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನ್ನು ನಿಗದಿಪಡಿಸಲಾಗಿತ್ತು. ಹೆಚ್ಚೂ ಕಡಿಮೆ 2020 ರ ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಿಂದ ಶುರುವಾಗಿರುವ ಮನೆಗೆಲಸ (ಡಬ್ಲ್ಯುಎಫ್‌ಎಚ್) ಇನ್ನೂ ಮುಗಿದಿಲ್ಲ. ಇದೇ ಪರಿಪಾಠವನ್ನು ಈಗಾಗಲೇ ಅನೇಕ ಕಂಪನಿಗಳು ಮುಂದುವರಿಸಿವೆ.

ಡಿ.31, 2020 ವರೆಗೆ ವರ್ಕ್ ಫ್ರಮ್ ಹೋಮ್ ನ್ನು ಸಾಧ್ಯವಾಗಿಸಲು ಟೆಲಿಕಾಂ ಇಲಾಖೆ ಸೇವಾ ಪೂರೈಕೆದಾರರಿಗೆ ಷರತ್ತು ಮತ್ತು ನಿಬಂಧನೆಗಳ ಸಡಿಲಿಕೆಯನ್ನು ವಿಸ್ತರಿಸಿದೆ ಎಂದು ಟ್ವೀಟ್ ಮೂಲಕ ಸ್ವತಃ ಇಲಾಖೆ ಸ್ಪಷ್ಟಪಡಿಸಿದೆ.

ಕೆಲ ಸಣ್ಣ ಪ್ರಮಾಣದ ಕಂಪನಿಗಳು ಕಟ್ಟಡದ ಬಾಡಿಗೆ, ವಿದ್ಯುತ್, ನೀರಿನ ಶುಲ್ಕ, ಕಟ್ಟಡ ನಿರ್ವಹಣಾ ವೆಚ್ಚ ಉಳಿಸುವುದಕ್ಕೆಂದೇ ಮನೆಯಿಂದಲೇ ಕರ್ತವ್ಯ ನಿರ್ಹಹಿಸುವ ಅಭ್ಯಾಸದ ಮೊರೆ ಹೋಗಿವೆ. ಬಹುತೇಕ ಶೇ.85 ರಷ್ಟು ಸಿಬ್ಬಂದಿ ಮನೆಯಿಂದ ಕೆಲಸ ಮಾಡುತ್ತಿದ್ದು, ಇನ್ನುಳಿದವರು ಅನಿವಾರ್ಯ ಕಾರಣಗಳಿಂದ ಕಚೇರಿಗೆ ಹೋಗುತ್ತಿದ್ದಾರೆ‌.

- Advertisement -

Latest News

error: Content is protected !!