Thursday, June 4, 2026
Homeಮನರಂಜನೆಕೊರೊನಾ ಸೋಂಕಿನಿಂದ ಸಂಸದೆ ಸುಮಲತಾ ಅಂಬರೀಷ್ ಗುಣಮುಖ​​

ಕೊರೊನಾ ಸೋಂಕಿನಿಂದ ಸಂಸದೆ ಸುಮಲತಾ ಅಂಬರೀಷ್ ಗುಣಮುಖ​​

- Advertisement -
- Advertisement -

ಬೆಂಗಳೂರು: ಮಂಡ್ಯ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಷ್​ ಅವರು ಕೊವಿಡ್-19 ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಇಂದು ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿರುವ ಅವರು, ಮೂರು ವಾರಗಳ ಕಡ್ಡಾಯ ಕ್ವಾರಂಟೈನ್​ ಮುಗಿಸಿದ್ದೇನೆ. ಇದೀಗ ನನ್ನ ಕೊವಿಡ್​-19 ಟೆಸ್ಟ್​ ವರದಿ ನೆಗೆಟಿವ್​ ಬಂದಿದ್ದು, ಸೋಂಕಿನಿಂದ ಸಂಪೂರ್ಣ ಮುಕ್ತಳಾಗಿದ್ದೇನೆ. ವೈದ್ಯರ ಸಲಹೆಯಂತೆ ಇನ್ನೂ ನಾಲ್ಕು ವಾರಗಳ ವಿಶ್ರಾಂತಿ ಪಡೆದು, ಮತ್ತೆ ಕಾರ್ಯದಲ್ಲಿ ತೊಡಿಸಿಕೊಳ್ಳುತ್ತೇನೆ. ಜನರ ಸೇವೆ ಮಾಡಲು ಕಾತರಳಾಗಿದ್ದೇನೆ ಎಂದು ಬರೆದಿದ್ದಾರೆ.

ನಿಮ್ಮೆಲ್ಲರ ಪ್ರಾರ್ಥನೆ, ಹಾರೈಕೆಯಿಂದ ಮೂರು ವಾರಗಳ ಕಡ್ಡಾಯ ಕ್ವಾರಂಟೈನ್‍ ಮುಗಿಸಿ, ಕೊವಿಡ್ ನಿಂದ ಸಂಪೂರ್ಣವಾಗಿ ಗುಣಮುಖಳಾಗಿದ್ದು, ಪರೀಕ್ಷೆಯ…

Posted by Sumalatha Ambareesh on Wednesday, 22 July 2020

ದೇಹಕ್ಕೆ ಚೈತನ್ಯ ತುಂಬಲು ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ನನ್ನ ಆರೋಗ್ಯಕ್ಕಾಗಿ ನೀವೆಲ್ಲ ಪ್ರಾರ್ಥಿಸಿದ್ದೀರಿ. ಶೀಘ್ರವೇ ಗುಣಮುಖರಾಗಿ ಎಂದು ಶುಭ ಹಾರೈಸಿದ್ದೀರಿ. ದೇವರ ಅನುಗ್ರಹದ ಜತೆಗೆ ವೈದ್ಯರಾದ ಡಾ. ಸತೀಶ್​ ಅವರು ನೀಡಿದ ಚಿಕಿತ್ಸೆ ಮತ್ತು ಸಲಹೆ ನನ್ನಲ್ಲಿ ಸಾಕಷ್ಟು ಧೈರ್ಯ ತುಂಬಿದೆ. ಕರೊನಾ ಗೆದ್ದು ಬರಲು ಸಹಾರಿಯಾದವು ಎಂದು ಸುಮಲತಾ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಸುಮಲತಾ ಅವರಿಗೆ ಜು.6ರಂದು ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಅದಾದ ಬಳಿಕ ಮನೆಯಲ್ಲೇ ಕ್ವಾರಂಟೈನ್​ ಆಗಿ, ಚಿಕಿತ್ಸೆ ಪಡೆದಿದ್ದರು.

- Advertisement -

Latest News

error: Content is protected !!