Tuesday, June 23, 2026
Homeತಾಜಾ ಸುದ್ದಿಯಾವಾಗ ನನ್ನ ಕರೆಯುತ್ತಾರೋ ಆಗ ದೆಹಲಿಗೆ ಹೋಗುತ್ತೇನೆ; ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಯಾವಾಗ ನನ್ನ ಕರೆಯುತ್ತಾರೋ ಆಗ ದೆಹಲಿಗೆ ಹೋಗುತ್ತೇನೆ; ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

- Advertisement -
- Advertisement -

ಬೆಂಗಳೂರು: ಯಾವಾಗ ನನ್ನನ್ನು ಕರೆಯುತ್ತಾರೋ ಆಗ ನಾನು ದೆಹಲಿಗೆ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಬೆಂಗಳೂರಿನಲ್ಲಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಪ್ರತಿಕ್ರಿಯಿಸಿದ ಸಿಎಂ, ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡಿರೂ ನಾನು ಅದರ ಪ್ರಕಾರವೇ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.

ಇದೇ ವೇಳೆ, ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು, ಡಿ.ಕೆ. ಶಿವಕುಮಾರ್, ಮಂತ್ರಿಗಳು ಮತ್ತು ನಾಯಕರು ಬದ್ಧವಾಗಿರಬೇಕು ಎಂದು ಹೇಳಿರುವ ಸಿದ್ಧರಾಮಯ್ಯ, ‌ನಾನು ಯಾವತ್ತೂ ಡಲ್ ಆಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಎರಡೂವರೆ ವರ್ಷಗಳ ಬಳಿಕದ ಅಧಿಕಾರ ಹಸ್ತಾಂತರ ಕುರಿತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿಎಂ ಸಿದ್ಧರಾಮಯ್ಯ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿತ್ತು.

- Advertisement -

Latest News

error: Content is protected !!