Sunday, June 7, 2026
Homeತಾಜಾ ಸುದ್ದಿಮುಂಬೈ: ಅಳಿವಿನಂಚಿನಲ್ಲಿರುವ ತಿಮಿಂಗಲವನ್ನು ಬೇಟೆಯಾಡಿ ಮಾಂಸ ಮಾಡಿದವರ ಬಂಧನ

ಮುಂಬೈ: ಅಳಿವಿನಂಚಿನಲ್ಲಿರುವ ತಿಮಿಂಗಲವನ್ನು ಬೇಟೆಯಾಡಿ ಮಾಂಸ ಮಾಡಿದವರ ಬಂಧನ

- Advertisement -
- Advertisement -

ಕೊಲಾಬಾ: ಅಳಿವಿನಂಚಿನಲ್ಲಿರುವ ತಿಮಿಂಗಿಲವನ್ನು ಬೇಟೆಯಾಡಿ ನಂತರ ಅದನ್ನು ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿಯನ್ನು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಕೊಲಾಬಾದಲ್ಲಿ ನಡೆದಿದೆ.

25 ಅಡಿ ಉದ್ದದ ಹೆಣ್ಣು ತಿಮಿಂಗಿಲವನ್ನು ಬೇಟೆಯಾಡಿ ಅದನ್ನು ತುಂಡುತುಂಡಾಗಿ ಕತ್ತರಿಸಿದ್ದನ್ನು ಅಧಿಕಾರಿಗಳು ದಡದ ಮೇಲೆ ನೋಡಿದ್ದರು. ನಂತರ ತನಿಖೆ ನಡೆಸಿದಾಗ ಅದನ್ನು ಅಕ್ರಮವಾಗಿ ಬೇಟೆಯಾಡಿರುವುದು ಪತ್ತೆಯಾಗಿದೆ.

ರಿಂಕೋಡಾನ್ ಟೈಪಸ್ ಶಾರ್ಕ್ ಎಂಬ ವೈಜ್ಞಾನಿಕ ಹೆಸರಿನ ಈ ಅಪರೂಪದ ತಿಮಿಂಗಿಲವನ್ನು ಬೇಟೆಯಾಡುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ (ಡಬ್ಲ್ಯುಪಿಎ) ವಿರೋಧ ವಾಗಿದೆ. ಪಶ್ಚಿಮ ಕರಾವಳಿಯಲ್ಲಿ ಹೆಚ್ಚಾಗಿ ಕಂಡುಬರುವ ಈ ಪ್ರಭೇದವನ್ನು ಅಳಿವಿನಂಚಿನಲ್ಲಿರುವ ಪ್ರಭೇದವೆಂದು ಘೋಷಣೆ ಮಾಡಲಾಗಿದೆ.

ಈ ತಿಮಿಂಗಲದ ಯಕೃತ್ತು ಮತ್ತು ಬಾಲದಿಂದ ಬಾರಿ ಮೌಲ್ಯದ ಎಣ್ಣೆಯನ್ನು ತಯಾರಿಸಲಾಗುತ್ತಿದ್ದು, ಆದುದರಿಂದ ಈ ತಿಮಿಂಗಿಲವನ್ನು ಬೇಟೆಯಾಡಿ ಮಾರಾಟ ಮಾಡಲಾಗುತ್ತದೆ.

- Advertisement -

Latest News

error: Content is protected !!