Monday, June 8, 2026
Homeತಾಜಾ ಸುದ್ದಿಮಹಿಳಾ ದೌರ್ಜನ್ಯವನ್ನು ಖಂಡಿಸುವ ಭರದಲ್ಲಿ ಯಡವಟ್ಟು ಮಾಡಿಕೊಂಡ ದರ್ಶನ್ ಪತ್ನಿ- ಅಷ್ಟಕ್ಕೂ ವಿಜಯಲಕ್ಷ್ಮೀ ದರ್ಶನ್ ಏನ್...

ಮಹಿಳಾ ದೌರ್ಜನ್ಯವನ್ನು ಖಂಡಿಸುವ ಭರದಲ್ಲಿ ಯಡವಟ್ಟು ಮಾಡಿಕೊಂಡ ದರ್ಶನ್ ಪತ್ನಿ- ಅಷ್ಟಕ್ಕೂ ವಿಜಯಲಕ್ಷ್ಮೀ ದರ್ಶನ್ ಏನ್ ಮಾಡಿದ್ದಾರೆ ಗೊತ್ತಾ?

- Advertisement -
- Advertisement -

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಪತ್ನಿ ಅವರು ನವರಾತ್ರಿ ವಿಚಾರವಾಗಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಸಧ್ಯ ಈ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಪರ-ವಿರೋಧದ ಮಾತುಗಳು ಕೇಳಿಬರುತ್ತಿವೆ, 9 ದಿನ ಮಹಿಳೆಯನ್ನು ಪೂಜಿಸುವ ನಾಡಿನಲ್ಲಿಯೇ ಮಹಿಳೆಯರ ಮೇಲೆ ದೌರ್ಜನ್ಯ ಜಾಸ್ತಿ ಎಂದು ವಿಜಯಲಕ್ಷ್ಮೀ ದರ್ಶನ್ ಬರೆದುಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಟ್ವಿಟರ್‌ನಲ್ಲಿ ಸಕ್ರಿಯರಾಗಿದ್ದು, ದೇಶ ನವರಾತ್ರಿ ಆಚರಣೆ ಮಾಡುವ ಸಂಭ್ರಮದಲ್ಲಿ ನವರಾತ್ರಿ ಶುಭಾಶಯ ತಿಳಿಸುವವೇಳೆ ವಿಜಯಲಕ್ಷ್ಮೀ ಅವರು ಬೇರೆಯದೇ ಆದ ಮಾತನಾಡಿದ್ದಾರೆ.

‘ದೇಶದಲ್ಲಿ ಮಹಿಳೆಯ ಮೇಲೆ ಸಾಕಷ್ಟು ಅಪರಾಧ ಮಾಡಲಾಗುತ್ತಿದೆ, ಆದರೂ ಕೂಡ 9 ದಿನಗಳ ಕಾಲ ನವರಾತ್ರಿ ಆಚರಣೆ ಮಾಡುತ್ತೇವೆ’ ಎಂದು ವಿಜಯಲಕ್ಷ್ಮೀ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದು ‘ತಪ್ಪಿನ ವಿರುದ್ಧ ಹೋರಾಡಿ ಬೇಡಿ ಎಂದವರಾರು ಅದನ್ನು ಬಿಟ್ಟು ನಿಮ್ಮ ಪ್ರಚಾರಕ್ಕಾಗಿ ಹಿಂದೂ ದೇವರುಗಳನ್ನು ಬಳಸಿಕೊಳ್ಳುವುದು ತಪ್ಪು, ಕ್ಷಮೆ ಕೇಳಿ ದೊಡ್ಡವರೆನಿಸಿಕೊಳ್ಳಿ’ ಎಂಬ ಮಾತುಗಳು ಕೂಡ ಕೇಳಿಬಂದಿವೆ.

- Advertisement -

Latest News

error: Content is protected !!