Thursday, June 4, 2026
Homeತಾಜಾ ಸುದ್ದಿಚುನಾವಣೆಗೆ 10 ದಿನವಿರುವಾಗಲೇ ಹೆಣ್ಣುಮಗುವಿಗೆ ಜನ್ಮ ನೀಡಿದ ಏಕೈಕ ಮಹಿಳಾ ಅಭ್ಯರ್ಥಿ

ಚುನಾವಣೆಗೆ 10 ದಿನವಿರುವಾಗಲೇ ಹೆಣ್ಣುಮಗುವಿಗೆ ಜನ್ಮ ನೀಡಿದ ಏಕೈಕ ಮಹಿಳಾ ಅಭ್ಯರ್ಥಿ

- Advertisement -
- Advertisement -

ಪಟ್ನಾ: ಬಿಹಾರ ವಿಧಾನಸಭೆಗೆ ಇನ್ನೇನು ಚುನಾವಣೆ ಸಮೀಪಿಸಿದೆ. ಇದೇ 28ರಿಂದ ಚುನಾವಣೆ ನಡೆಯಲಿದೆ. ಈ ನಡುವೆ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ಜಗದೀಶ್ ಪುರದ ವಿಧಾನಸಭಾ ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿ ಸುಶುಮ್ಲತಾ ಕುಶ್ವಾಹ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಮಗುವಿಗೆ ಜನ್ಮ ನೀಡಿದ ಅಭ್ಯರ್ಥಿಗೆ ಸಿಎಂ ನಿತೀಶ್ ಕುಮಾರ್ ಶುಭ ಹಾರೈಸಿದ್ದಾರೆ. ಜಗದೀಶ್ ಪುರದ ವಿಧಾನಸಭಾ ಕ್ಷೇತ್ರದಿಂದ 15 ಮಂದಿ ಕಣಕ್ಕಿಳಿದಿದ್ದು, ಹಾಲಿ ಶಾಸಕ ಆರ್‌ಜೆಡಿಯ ರಂಬಿಶುನ್ ಸಿಂಗ್ ಲೋಹಿಯಾ ಮತ್ತು ಎಲ್‌ಜೆಪಿಯ ಭಗವಾನ್ ಸಿಂಗ್ ಕುಶ್ವಾಹ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.

2012 ರಲ್ಲಿ ವಿವಾಹವಾಗಿದ್ದ ಸುಶುಮ್ಲತಾ ಕುಶ್ವಾಹಗೆ ಈಗಾಗಲೇ 7 ವರ್ಷದ ಮಗಳು ಇದ್ದಾಳೆ. ಕುಶ್ವಾಹ ತಮ್ಮ ಗ್ರಾಮ ಪಂಚಾಯತ್ ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

- Advertisement -

Latest News

error: Content is protected !!