Sunday, August 23, 2026
Homeಕ್ರೀಡೆದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಆಲ್ರೌಂಡರ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಆಲ್ರೌಂಡರ್

- Advertisement -
- Advertisement -

ಚೆನ್ನೈ: ಟೀಂ ಇಂಡಿಯಾ ಆಲ್ರೌಂಡರ್ ವಿಜಯ್ ಶಂಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಬಹುಕಾಲದ ಗೆಳತಿ ವೈಶಾಲಿ ವಿಶ್ವೇಶರನ್ ರನ್ನು ಇಂದು ವಿವಾಹವಾಗಿದ್ದಾರೆ. ಚೆನ್ನೈನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ವಿಜಯ್ ಶಂಕರ್ ತಮ್ಮ ಬಹುಕಾಲದ ಗೆಳತಿ ವೈಶಾಲಿ ವಿಶ್ವೇಶರನ್ ರನ್ನು ಮದುವೆಯಾದರು. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ವೈಶಾಲಿ ವಿಶ್ವೇಶ್ವರನ್ ರನ್ನು ತಮ್ಮ ಕುಟುಂಬ ಸದಸ್ಯರು ಮತ್ತು ಬಂಧುಮಿತ್ರರ ಸಮ್ಮುಖದಲ್ಲಿ ವಿವಾಹವಾದರು.

ವಿಜಯ್ ಶಂಕರ್ ಹಾಗೂ ವೈಶಾಲಿ ನಿಶ್ಚಿತಾರ್ಥ ಕಳೆದ ಆಗಸ್ಟ್​ನಲ್ಲೇ ನಡೆದಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ವಿವಾಹವನ್ನು ಮುಂದೂಡಲಾಗಿತ್ತು. ಇದೀಗ ಚೆನ್ನೈಯಲ್ಲಿ ವಿವಾಹ ಸಮಾರಂಭ ನೆರವೇರಿತು. ಕೋವಿಡ್-19 ಮಾರ್ಗಸೂಚಿ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ಸದಸ್ಯರಿಗಷ್ಟೇ ಆಮಂತ್ರಣ ನೀಡಲಾಗಿತ್ತು.

29 ವರ್ಷದ ವಿಜಯ್ ಶಂಕರ್, ಸಯ್ಯದ್ ಮುಷ್ಠಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ತಮಿಳುನಾಡಿನ ಪರ ಲೀಗ್ ಹಂತದಲ್ಲಿ ಆಡಿದ್ದರು. ಬಳಿಕ ಮದುವೆ ಹಿನ್ನೆಲೆಯಲ್ಲಿ ನಾಕೌಟ್ ಹಂತದಿಂದ ಹಿಂದೆ ಸರಿದಿದ್ದಾರೆ. ಕೋಲ್ಕತಾದಲ್ಲಿ ನಡೆದ ಲೀಗ್ ಹಂತದಲ್ಲಿ ವಿಜಯ್ ಶಂಕರ್ 5 ಪಂದ್ಯಗಳನ್ನೂ ಆಡಿದ್ದರು. ನಾಕೌಟ್ ಹಂತಕ್ಕೆ ಅಲಭ್ಯತೆ ಕುರಿತು ವಿಜಯ್ ಶಂಕರ್ ಈ ಮೊದಲೇ ತಮಿಳುನಾಡು ಕ್ರಿಕೆಟ್ ಮಂಡಳಿಗೆ ತಿಳಿಸಿದ್ದರು.

2019ರಲ್ಲಿ ಬ್ರಿಟನ್ ನಲ್ಲಿ ನಡೆದಿದ್ದ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ವಿಜಯ್ ಶಂಕರ್ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು. ವಿಜಯ್‍ಶಂಕರ್ ಅವರು 12 ಏಕದಿನ ಹಾಗೂ 9 ಟಿ-20 ಪಂದ್ಯವನ್ನು ಆಡಿದ್ದಾರೆ. ಐಪಿಎಲ್‍ನಲ್ಲಿ ವಿಜಯ್‍ಶಂಕರ್ ಸನ್‍ರೈಸರ್ಸ್ ಹೈದ್ರಾಬಾದ್ ಪರ ಆಡುತ್ತಿದ್ದು ಎಸ್‍ಆರ್‍ಎಚ್ ತಂಡವು ತಮ್ಮ ಅಧಿಕೃತ ವೆಬ್‍ಸೈಟ್ ಮೂಲಕ ದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಭಾರತದ ಮತ್ತೋರ್ವ ಕ್ರಿಕೆಟಿಗ ಯಜುವೇಂದ್ರ ಚಾಹಲ್ ವಿವಾಹ ಕೂಡ ಇತ್ತೀಚೆಗಷ್ಟೇ ದಂತವೈದ್ಯೆ, ಡ್ಯಾನ್ಸರ್ ಧನಶ್ರೀ ವರ್ಮರನ್ನು ವಿವಾಹವಾಗಿದ್ದರು.

- Advertisement -

Latest News

error: Content is protected !!