Sunday, May 5, 2024
Homeತಾಜಾ ಸುದ್ದಿಫೆ.1ರಿಂದ 9ನೇ ಹಾಗೂ ಪ್ರಥಮ ಪಿಯುಸಿ ತರಗತಿ ಆರಂಭ: 1ನೇ ತರಗತಿಯಿಂದ 5ನೇ ತರಗತಿವರೆಗಿನ ಮಕ್ಕಳಿಗೆ...

ಫೆ.1ರಿಂದ 9ನೇ ಹಾಗೂ ಪ್ರಥಮ ಪಿಯುಸಿ ತರಗತಿ ಆರಂಭ: 1ನೇ ತರಗತಿಯಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಸದ್ಯಕ್ಕಿಲ್ಲ ಶಾಲೆ : 6 ರಿಂದ 8 ನೇ ತರಗತಿವರೆಗೆ ವಿದ್ಯಾಗಮ ಯೋಜನೆ ಮುಂದುವರಿಕೆ

spot_img
- Advertisement -
- Advertisement -

ಬೆಂಗಳೂರು : ಇಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯವರು ರಾಜ್ಯದಲ್ಲಿ ಕೊರೋನಾ ಸೋಂಕಿನ ನಡುವೆಯೂ ಫೆ.6ರಿಂದ 6,7,8,9 ಹಾಗೂ ಪಿಯುಸಿ ತರಗತಿ ಆರಂಭದ ಬಗ್ಗೆ ಸಲಹೆ ನೀಡಿದೆ. ಆದ್ರೇ ಫೆಬ್ರವರಿ 1ರಿಂದ ಮೊದಲು 9ನೇ ತರಗತಿ, ಎಸ್ ಎಸ್ ಎಲ್ ಸಿ ಹಾಗೂ ಪ್ರಥಮ ಪಿಯುಸಿ ಅರ್ಧ ದಿನದ ಬದಲಾಗಿ ಪೂರ್ಣ ದಿನದ ತರಗತಿ ಆರಂಭಿಸಲಾಗುತ್ತದೆ. ಆನಂತ್ರ ಫೆಬ್ರವರಿ 2ನೇ ವಾರದಲ್ಲಿ ಈ ತರಗತಿಗಳ ಮಕ್ಕಳ ಹಾಜರಾತಿಯನ್ನು ಗಮನಿಸಿ, ಮುಂದಿನ ತರಗತಿ ಆರಂಭಿಸಲಾಗುತ್ತದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತಂತೆ ಇಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 1 ರಿಂದ 5ರವರೆಗೆ ವಿದ್ಯಾಗಮ ವಿಸ್ತರಿಸುವ ಬಗ್ಗೆಯೂ ಕೋವಿಡ್ ತಾಂತ್ರಿಕ ಸಮಿತಿ ತಿಳಿಸಿದೆ. ಇವತ್ತು ಬಹಳಷ್ಟು ಚರ್ಚೆಯಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿನ ಪರಿಸ್ಥಿತಿ ಚರ್ಚೆ ಮಾಡಿ, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನೀಡಿರುವಂತ ಮಾಹಿತಿಯ ಅನುಸಾರವಾಗಿ, ಫೆಬ್ರವರಿ 1ನೇ ತಾರೀಕಿನಿಂದ ಹೈಸ್ಕೂಲ್ ನಿಂದ 9ನೇ ತರಗತಿ, ಎಸ್ ಎಸ್ ಎಲ್ ಸಿ, ಪ್ರಥಮ ಪಿಯುಸಿ ಅರ್ಧ ದಿನದ ಬದಲಾಗಿ ಪೂರ್ಣ ದಿನದ ಅವಧಿಯಲ್ಲಿ ತರಗತಿ ನಡೆಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ರು.

6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ಚಟುವಟಿಕೆ ಮುಂದುವರೆಯಲಿದೆ. ನಾವು ಫೆಬ್ರವರಿ 2ನೇ ವಾರದವರೆಗೆ ಈಗಿನ ಪರಿಸ್ಥಿತಿಯನ್ನು ಗಮನಿಸಿ, 9, 10, 12 ಹಾಜರಾತಿಯನ್ನು ಗಮನಿಸಿ, ವಾತಾವರಣ ನೋಡಿಕೊಂಡು, ಉಳಿದ ತರಗತಿಗಳ ಪ್ರಾರಂಭದ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯವರು ಸಲಹೆ ಮಾಡಿದ್ದಾರೆ ಎಂದು ತಿಳಿಸಿದರು.

- Advertisement -
spot_img

Latest News

error: Content is protected !!