Saturday, May 18, 2024
Homeತಾಜಾ ಸುದ್ದಿಲಾಕ್ ಡೌನ್ ವೇಳೆ 5ನೇ ಮದುವೆಯಾದ ಖ್ಯಾತ ನಟಿ

ಲಾಕ್ ಡೌನ್ ವೇಳೆ 5ನೇ ಮದುವೆಯಾದ ಖ್ಯಾತ ನಟಿ

spot_img
- Advertisement -
- Advertisement -

ನ್ಯೂಯಾರ್ಕ್: ಪ್ಲೇ ಬಾಯ್ ನಿಯತಕಾಲಿಕೆಯ ಸ್ಟಾರ್ ಐಕಾನ್ ಎಂದೇ ಕರೆಸಿಕೊಳ್ಳುವ ಹಾಲಿವುಡ್ ನಟಿ ಹಾಗೂ ಟಿವಿ ಸ್ಟಾರ್ ಪಮೇಲಾ ಆಂಡರ್ಸನ್ 5ನೇ ಮದುವೆಯಾಗಿದ್ದಾರೆ. ಒಂದೇ ವ್ಯಕ್ತಿಯನ್ನು ಪಮೇಲಾ ಎರಡು ಬಾರಿ ಮದುವೆಯಾಗಿದ್ದಾರೆ.

ಕ್ರಿಸ್ಮಸ್ ಸಂದರ್ಭದಲ್ಲಿ ಪಮೇಲಾ ಐದನೇ ಮದುವೆಯಾಗಿದ್ದಾರೆ. ಪಮೇಲಾ ಈ ಬಾರಿ ತನ್ನ ಬಾಡಿಗಾರ್ಡ್ ಕೈ ಹಿಡಿದಿದ್ದಾರೆ. ಬಾಡಿಗಾರ್ಡ್ ಡಾನ್ ಹೇಹರ್ಸ್ಟ್ ತನ್ನ ಪತಿ ಎಂದು ಪಮೇಲಾ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಸಾಕಷ್ಟು ಫೋಟೋ ವೈರಲ್ ಆಗಿದೆ. ಒಂದು ಫೋಟೋದಲ್ಲಿ ಪಮೇಲಾ, ಡಾನ್ ಹೇಹರ್ಸ್ಟ್ ಗೆ ಮುತ್ತಿಟ್ಟರೆ ಮತ್ತೆ ಕೆಲ ಫೋಟೋಕ್ಕೆ ಫೋಸ್ ನೀಡಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಬಾಡಿ ಗಾರ್ಡ್ ಮೇಲೆ ಪ್ರೀತಿ ಚಿಗುರಿತ್ತು. ನಂತ್ರ ಮದುವೆಯಾದೆವು. ಕೆಲವರನ್ನು ಮದುವೆಗೆ ಕರೆಯಲು ಸಾಧ್ಯವಾಗ್ಲಿಲ್ಲ. ಕುಟುಂಬಸ್ಥರು ಮತ್ತು ಕೆಲವೇ ಕೆಲವು ಸ್ನೇಹಿತರು ಬಂದಿದ್ದರು ಎಂದು ಪಮೇಲಾ ಹೇಳಿದ್ದರು.

‘ಬೇವಾಚ್: ವೈಟ್ ಥಂಡರ್ ಅಟ್ ಗ್ಲೇಷಿಯರ್ ಬೇ’, ‘ಬಾರ್ಬ್ ವೈರ್’, ‘ಸ್ನಾಪ್ ಡ್ರಾಗನ್’, ‘ಹಾಲಿವುಡ್ ಅಂಡ್ ವೈನ್’ ಮುಂತಾದ ಚಿತ್ರಗಳ ಮೂಲಕ ಜನಪ್ರಿಯತೆ ಪಡೆದ ನಟಿ, ರಿಯಾಲಿಟಿ ಸ್ಟಾರ್ ಪಮೇಲಾ ಆಂಡರ್ಸನ್ ಗೀಗ 52 ವರ್ಷ ವಯಸ್ಸು.

ಇದಕ್ಕೂ ಮೊದಲು ಫೆಬ್ರವರಿಯಲ್ಲಿ ಪಮೇಲಾ ಸುದ್ದಿಗೆ ಬಂದಿದ್ದರು. ಪಮೇಲಾ ತನ್ನ 4 ನೇ ವಿವಾಹವನ್ನು ಜಾನ್ ಎಂಬಾತನ ಜೊತೆ ಮಾಲಿಬುವಿನಲ್ಲಿ ನಡೆದ ರಹಸ್ಯ ಸಮಾರಂಭದಲ್ಲಿ ನಡೆದಿತ್ತು. ಪಮೇಲಾ ಮತ್ತು ಜಾನ್ ಅವರ ಮಕ್ಕಳು ಮತ್ತು ಸ್ನೇಹಿತರು ಈ ಮದುವೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಇಬ್ಬರೂ ಗಂಡ ಹೆಂಡತಿಯಾಗಲು ಅಧಿಕೃತ ದಾಖಲೆಗಳನ್ನು ಸಲ್ಲಿಸಲಿಲ್ಲ. ಕೇವಲ 12 ದಿನದಲ್ಲೇ ಜಾನ್ ಪೀಟರ್ಸ್ ಸಂಬಂಧವನ್ನು ಮುರಿದುಕೊಂಡಿದ್ದಳು ಪಮೇಲಾ.

ಮೊದಲ ಬಾರಿ ಪಮೇಲಾ 1995ರಲ್ಲಿ ಮದುವೆಯಾಗಿದ್ದರು. 1998ರಲ್ಲಿ ಮದುವೆ ಮುರಿದು ಬಿದ್ದಿತ್ತು. ಪಮೇಲಾ ಬಿಗ್ ಬಾಸ್ ಸೀಸನ್ 4 ರಲ್ಲಿ ಕಾಣಿಸಿಕೊಂಡಿದ್ದಳು.

- Advertisement -
spot_img

Latest News

error: Content is protected !!