Friday, June 26, 2026
Homeತಾಜಾ ಸುದ್ದಿಎಸ್ ಎಸ್ ಎಲ್ ಸಿ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ:ಜೂನ್ 14 ರಿಂದ ಪರೀಕ್ಷೆ ಆರಂಭ

ಎಸ್ ಎಸ್ ಎಲ್ ಸಿ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ:ಜೂನ್ 14 ರಿಂದ ಪರೀಕ್ಷೆ ಆರಂಭ

- Advertisement -
- Advertisement -

ಬೆಂಗಳೂರು: 2020-2021 ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷಾ ದಿನಾಂಕ ಘೋಷಣೆಯಾಗಿದೆ. ಕೊರೊನಾ ಕಾರಣದಿಂದಾಗಿ ಈ ಬಾರಿ ಜೂನ್ ನಲ್ಲಿ ಎಸ್ಸೆಸೆಲ್ಸಿ ಪರೀಕ್ಷೆ ನಡೆಯಲಿದೆ. ಜೂನ್ 14 ರಿಂದ ಪರೀಕ್ಷೆ ಆರಂಭವಾಗಲಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ,

ಜೂನ್ 14 ರಿಂದ ಜೂನ್ 25 ರವರೆಗೆ ಪರೀಕ್ಷೆ ನಡೆಯಲಿದೆ. ಜೂನ್ 14 ರಂದು ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆಯಲಿದೆ.ಜೂನ್ 16 ರಂದು ಗಣಿತ , ಜೂನ್ 18, ದ್ವಿತೀಯ ಭಾಷೆ ಇಂಗ್ಲೀಷ್ ಅಥವಾ ಕನ್ನಡ, ಜೂನ್ 21 ವಿಜ್ಞಾನ, ಜೂನ್ 23 ತೃತೀಯ ಭಾಷೆ, ಜೂನ್ 25 ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.

ಇದು ತಾತ್ಕಾಲಿಕ ಪರೀಕ್ಷಾ ವೇಳಾ ಪಟ್ಟಿಯಾಗಿದ್ದು, ಯಾವುದೇ ವಿದ್ಯಾರ್ಥಿ, ಪೋಷಕರಿಗೆ ಆಕ್ಷೇಪಗಳಿದ್ದರೇ ಫೆಬ್ರವರಿ 26ರೊಳಗೆ ಸಲ್ಲಿಸುವಂತೆ ತಿಳಿಸಿದ್ದಾರೆ..

- Advertisement -

Latest News

error: Content is protected !!