Thursday, June 4, 2026
Homeಕರಾವಳಿಉಡುಪಿಸ್ಕೂಟರ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಅಪರಿಚಿತರಿಂದ ದಾಳಿ

ಸ್ಕೂಟರ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಅಪರಿಚಿತರಿಂದ ದಾಳಿ

- Advertisement -
- Advertisement -

ಉಡುಪಿ: ಸ್ಕೂಟರ್‌ನಲ್ಲಿ ಹೋತ್ತಿಗುದ್ದ ವ್ಯಕ್ತಿಯ ಮೇಲೆ ಅಪರಿಚಿತ ವ್ಯಕ್ತಿಗಳ ತಂಡ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಕಾಪುವಿನ  ಕೊಪ್ಪಲಂಗಡಿ ಕಮ್ಯೂನಿಟಿ ಹಾಲ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಕೊಪ್ಪಲಂಗಡಿಯ ಬಾಡಿಗೆ ಮನೆ ನಿವಾಸಿ ಅಬ್ದುಲ್ ರಹೀಮ್(46) ಎಂಬವರು ಮೂಳೂರುನಿಂದ ಕೊಪ್ಪಲಂಗಡಿ ಕಡೆಗೆ ಸ್ಕೂಟರ್‌ನಲ್ಲಿ ಅಬ್ದುಲ್ ಅಝೀಝ್ ಜೊತೆ ಸಹಸವಾರರಾಗಿ ಬರುತ್ತಿದ್ದರು. ಈ ಮಧ್ಯೆ ನಿಂತಿದ್ದ ರಿಡ್ಜ್ ಕಾರಿನಲ್ಲಿದ್ದ ಮಾಸ್ಕ್ ಧರಿಸಿದ್ದ ಐವರು ಸ್ಕೂಟರನ್ನು ತಡೆದರೆನ್ನಲಾಗಿದೆ.

ಬಳಿಕ ಅವರು ರಹೀಮ್‌ಗೆ ಬಿದರಿ ಕೋಲಿನಿಂದ ಮುಖಕ್ಕೆ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಗಾಯಗೊಂಡ ರಹೀಮ್ ಜಿಲ್ಲಾ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!