Thursday, June 4, 2026
Homeತಾಜಾ ಸುದ್ದಿಆಟವಾಡುತ್ತಾ ಗಣೇಶನ ಮೂರ್ತಿಯನ್ನು ನುಂಗಿದ ಬಾಲಕ: ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯರು

ಆಟವಾಡುತ್ತಾ ಗಣೇಶನ ಮೂರ್ತಿಯನ್ನು ನುಂಗಿದ ಬಾಲಕ: ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯರು

- Advertisement -
- Advertisement -

ಬೆಂಗಳೂರು: ಆಟವಾಡುತ್ತಾ ಸುಮಾರು 5 ಸೆಂ.ಮೀ ಉದ್ದದ ಗಣೇಶ ವಿಗ್ರಹವನ್ನು ನುಂಗಿದ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮೂಲಕ ವಿಗ್ರಹವನ್ನು ಹೊರ ತೆಗೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

3 ವರ್ಷದ ಬಾಲಕನೊಬ್ಬ ಆಟವಾಡುತ್ತಾ ಗಣೇಶ ವಿಗ್ರಹವನ್ನು ನುಂಗಿದ್ದಾನೆ. ಕೂಡಲೇ ಆತನನ್ನು ಬೆಂಗಳೂರಿನ  ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಕ್ಷಣದ ವೈದ್ಯಕೀಯ ಚಿಕಿತ್ಸೆ ಮೂಲಕ  ಮೂರು ವರ್ಷದ ಬಾಲಕನನ್ನು ಉಳಿಸಿದ್ದಾರೆ.

ಮಗುವಿಗೆ ಮೇಲಿನ ಎದೆಯಲ್ಲಿ ನೋವು ಮತ್ತು ಎಂಜಲು ನುಂಗಲು ತೊಂದರೆ ಉಂಟಾಗಿತ್ತು. ಹಾಗಾಗಿ ಪೋಷಕರು ಮಗುವನ್ನು ಹಳೆಯ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಎಕ್ಸರೇ ತೆಗೆದಾಗ ಮಗು ವಿಗ್ರಹ ನುಂಗಿರೋದು ಗೊತ್ತಾಗಿದೆ.  ಕೂಡಲೇ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಮಗುವನ್ನು ಉಳಿಸಿದ್ದಾರೆ.

- Advertisement -

Latest News

error: Content is protected !!