Sunday, June 7, 2026
Homeತಾಜಾ ಸುದ್ದಿಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ

ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ

- Advertisement -
- Advertisement -

ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಬುಧವಾರ ರಾಜೀನಾಮೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.  ಅಲ್ಲದೇ ಇನ್ನೋರ್ವ ಸಚಿವ ಕೇಂದ್ರ ಸಚಿವರಾದ ಆರ್‌ಸಿಪಿ ಸಿಂಗ್ ಅವರು ಸಹ ರಾಜೀನಾಮೆ ನೀಡಿದ್ದಾರೆ.

ಈ ಇಬ್ಬರು ಸಚಿವರು ಬುಧವಾರ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ನಖ್ವಿ ಮತ್ತು ಸಿಂಗ್ ಇಬ್ಬರ ರಾಜ್ಯಸಭಾ ಅಧಿಕಾರಾವಧಿ ಗುರುವಾರ ಕೊನೆಗೊಳ್ಳಲಿದೆ. ನಖ್ವಿ ಅವರು ಅಲ್ಪಸಂಖ್ಯಾತ ವ್ಯವಹಾರಗಳ ಖಾತೆಯ ಹೊಣೆ ಹೊತ್ತಿದ್ದರೆ, ಸಿಂಗ್ ಸಂಪುಟದಲ್ಲಿ ಉಕ್ಕು ಸಚಿವರಾಗಿದ್ದರು.ಮೂಲಗಳ ಪ್ರಕಾರ, ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಗಳಿಗಾಗಿ ಪ್ರಧಾನಿ ಮೋದಿ ಬುಧವಾರ ನಖ್ವಿ ಮತ್ತು ಸಿಂಗ್ ಅವರನ್ನು ಶ್ಲಾಘಿಸಿದ್ದಾರೆ. ಸಂಪುಟ ಸಭೆಯ ನಂತರ ನಖ್ವಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಭೇಟಿಯಾದರು. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಆಗಸ್ಟ್‌ನಲ್ಲಿ ನಡೆಯಲಿರುವ ಚುನಾವಣೆಗೆ ಬಿಜೆಪಿ ನಖ್ವಿ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿ ಹೆಸರಿಸಲಾಗಿದೆ ಎಂದು ಹೇಳಲಾಗಿದೆ

.

- Advertisement -

Latest News

error: Content is protected !!