Monday, June 8, 2026
HomeWorld ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಸಿನೆಮಾ ನೋಡಲಿದ್ದಾರೆ ಕೇಂದ್ರ ಗೃಹ ಸಚಿವ ಅಮಿತ್ ಶಾ

 ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಸಿನೆಮಾ ನೋಡಲಿದ್ದಾರೆ ಕೇಂದ್ರ ಗೃಹ ಸಚಿವ ಅಮಿತ್ ಶಾ

- Advertisement -
- Advertisement -

ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಸಿನಿಮಾ ಜೂನ್ 3 ರಂದು  ಹಿಂದಿ ಮಾತ್ರವಲ್ಲದೇ ತೆಲುಗು, ತಮಿಳಿಗೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಕೇಂದ್ರ ಸರಕಾರದ ಜೊತೆಗೆ ಒಳ್ಳೆ ಬಾಂದವ್ಯವನ್ನು ಹೊಂದಿರುವ ನಟ ಅಕ್ಷಯ್ ಕುಮಾರ್ ಅವರ ಸಿನಿಮಾವನ್ನು ಈ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೋಡಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

ಈ ಕುರಿತು ಚಿತ್ರತಂಡ ಅಮಿತ್ ಶಾ ಜೊತೆ  ಮಾತುಕತೆ ಕೂಡಾ ಆಡಿದ್ದು, ಅವರು ಕೂಡಾ ಸಿನಿಮಾವನ್ನು ನೋಡಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜೂನ್ 1 ರಂದು ಚಿತ್ರತಂಡವು ದೆಹಲಿಯಲ್ಲಿ ವಿಶೇಷ ಪ್ರದರ್ಶನವನ್ನು ಆಯೋಜನೆ ಮಾಡಿದ್ದು, ಈ ವಿಶೇಷ ಪ್ರದರ್ಶನಕ್ಕೆ ಕೇಂದ್ರದ ಹಲವು ಮಂತ್ರಿಗಳನ್ನು, ಸಂಸದರನ್ನು ಹಾಗೂ ಉನ್ನತ ಮಟ್ಟದ ಅಧಿಕಾರಿಗಳನ್ನು ಆಹ್ವಾನಿಸಲಾಗಿದ್ದು, ಅಂದೇ ಅಮಿತ್ ಶಾ ಅವರು ಕೂಡಾ ಸಿನಿಮಾವನ್ನು ವೀಕ್ಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

 ರಾಷ್ಟ್ರಪ್ರೇಮ ಸಾರುವಂತಹ ಹಲವಾರು ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ನಟನೆ ಮಾಡಿದ್ದು, ಅವರ ಸಿನಿಮಾ ಬಂದಾಗಲೆಲ್ಲ ಕೇಂದ್ರ ಸರ್ಕಾರದ ಮಂತ್ರಿಗಳು ಮತ್ತು ಸಂಸದರು ಅವರ ಚಿತ್ರಗಳ ಕುರಿತು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.  

- Advertisement -

Latest News

error: Content is protected !!