Sunday, May 19, 2024
Homeತಾಜಾ ಸುದ್ದಿಜನ ಮನ ಗಣ ಹಾಡಿಗೆ ಇರುವ ಸ್ಥಾನಮಾನ ವಂದೇ ಮಾತರಂ ಗೂ ನೀಡುವಂತೆ ಒತ್ತಾಯಿಸಿ ಅರ್ಜಿ:...

ಜನ ಮನ ಗಣ ಹಾಡಿಗೆ ಇರುವ ಸ್ಥಾನಮಾನ ವಂದೇ ಮಾತರಂ ಗೂ ನೀಡುವಂತೆ ಒತ್ತಾಯಿಸಿ ಅರ್ಜಿ: ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ನೋಟೀಸ್

spot_img
- Advertisement -
- Advertisement -

ಭಾರತದ ರಾಷ್ಟ್ರಗೀತೆಯಾದ ‘ಜನ ಮನ ಗಣ’ ಹಾಡಿಗೆ ಇರುವ ಸ್ಥಾನಮಾನ ಮತ್ತು ಗೌರವ ‘ವಂದೇ ಮಾತರಂ’ಗೂ ಇರುವಂತೆ ಘೋಷಣೆ ಆಗಬೇಕೆಂದು ಒತ್ತಾಯಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ದೆಹಲಿ ಹೈಕೋರ್ಟ್ ಇಂದು ಬುಧವಾರ ಕೇಂದ್ರ ಸರಕಾರಕ್ಕೆ ನೋಟೀಸ್ ಜಾರಿ ಮಾಡಿದೆ

ಅರ್ಜಿಯ ಬಗ್ಗೆ ಎಚ್ಚರಿಸಿ ನ್ಯಾಯಾಧೀಶರಾದ ವಿಪಿನ್ ಸಂಘಿ ಮತ್ತು ಸಚಿನ್ ದತ್ತ ಅವರಿದ್ದ ಹೈಕೋರ್ಟ್ ನ್ಯಾಯಪೀಠ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ, ಶಿಕ್ಷಣ ಸಚಿವಾಲಯ, ಸಂಸ್ಕೃತಿ ಸಚಿವಾಲಯ, ನ್ಯಾಯ ಮತ್ತು ಕಾನೂನು ಸಚಿವಾಲಯ ಹಾಗೂ ಇತರ ಸಂಬಂಧಿಸಿದವರಿಗೆ ನೋಟೀಸ್ ನೀಡಿದೆ. ನವೆಂಬರ್ 9ರಂದು ಅರ್ಜಿಯ ವಿಚಾರಣೆಗೆ ದಿನ ನಿಗದಿ ಮಾಡಲಾಗಿದೆ. ಅದೇ ವೇಳೆ, ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಪಟ್ಟಿಗೆ ಸೇರುವ ಮುನ್ನವೇ ಮಾಧ್ಯಮಕ್ಕೆ ಹೋಗಿ ಪ್ರಚಾರ ಮಾಡಿದ್ದಕ್ಕೆ ಅರ್ಜಿದಾರರ ವಿರುದ್ಧ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ಆಯಿತು.

ವಂದೇ ಮಾತರಂನಲ್ಲಿ ಕೆಲ ಸಮುದಾಯಗಳ ಭಾವನೆಗೆ ಧಕ್ಕೆ ಆಗುತ್ತದೆ ಎಂಬ ಅಭಿಪ್ರಾಯ ಆಗಾಗ್ಗೆ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಈ ಅರ್ಜಿ ಗಮನ ಸೆಳೆಯುತ್ತಿದೆ ಎಲ್ಲಾ ಶಾಲೆ ಹಾಗು ಶಿಕ್ಷಣ ಸಂಸ್ಥೆಗಳಲ್ಲಿ ಜನ ಗಣ ಮನ ಗೀತೆಯ ಜೊತೆಗೆ ವಂದೇ ಮಾತರಂ ಹಾಡನ್ನೂ ಕಡ್ಡಾಯವಾಗಿ ಹಾಡಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಬೇಕೆಂದು ಪಿಐಎಲ್‌ನಲ್ಲಿ ಒತ್ತಾಯಿಸಲಾಗಿದೆ. ಈ ಸಂಬಂಧ 1950 ಜನವರಿ 24ರ ದಿನದಂದು ಸಂವಿಧಾನ ರಚನಾ ಸಭೆಯಲ್ಲಿ ಕೈಗೊಂಡ ನಿರ್ಣಯದ ಆಶಯದಲ್ಲಿ ಮಾರ್ಗಸೂಚಿ ರಚಿಸಬೇಕೆಂದು ಕೋರಲಾಗಿದೆ. ಬಿಜೆಪಿ ನಾಯಕ ಹಾಗೂ ವಕೀಲರಾಗಿರುವ ಅಶ್ವಿನಿಕುಮಾರ್ ಉಪಾಧ್ಯಾಯ ಈ ಅರ್ಜಿ ಸಲ್ಲಿಸಿದ್ದು. “ಭಾರತ ರಾಜ್ಯಗಳ ಸಂಯೋಜನೆಯೇ ಹೊರತು ರಾಜ್ಯಗಳ ಒಕ್ಕೂಟವಲ್ಲ ಅಥವಾ ಸಂಘಟನೆಯಲ್ಲ. ಇಲ್ಲಿರುವುದು ಒಂದೇ ರಾಷ್ಟ್ರೀಯತೆ, ಅದು ಭಾರತೀಯ ಮಾತ್ರ. ಹೀಗಾಗಿ, ಪ್ರತಿಯೊಬ್ಬ ಭಾರತೀಯನೂ ‘ವಂದೇ ಮಾತರಂ’ಗೆ ಗೌರವ ಕೊಡಬೇಕು” ಎಂದು ಅವರು ತಮ್ಮ ಅರ್ಜಿಯಲ್ಲಿ ಅಭಿಪ್ರಾಯ ಮಂಡಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮತ್ತು ಸ್ವಾತಂತ್ರ್ಯ ಬಂದ ಸಮಯದಲ್ಲಿ ಇಡೀ ದೇಶದ ಚಿಂತನೆ ಮತ್ತು ಧ್ಯೇಯಗಳಿಗೆ ದ್ಯೋತಕವಾಗಿದ್ದು ವಂದೇ ಮಾತರಂ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ವಂದೇ ಮಾತರಂ. ಜನರಿಗೆ ಹೋರಾಟದ ಕೆಚ್ಚು ಮತ್ತು ದೇಶಭಕ್ತಿಯ ಕಿಚ್ಚು ಹಚ್ಚುತ್ತಿದ್ದುದು ವಂದೇ ಮಾತರಂ ಘೋಷಣೆಗಳು. ಹೀಗಾಗಿ, ಬ್ರಿಟಿಷರು ಸಾರ್ವಜನಿಕ ಸ್ಥಳದಲ್ಲಿ ವಂದೇ ಮಾತರಂ ಘೋಷಣೆ ಮಾಡಬಾರದೆಂದು ನಿಷೇಧ ಜಾರಿಗೆ ತಂದರು. ಘೋಷಣೆ ಕೂಗಿದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸುವ ಕೆಲಸ ಮಾಡಿದರು” ಎಂದು ಅಶ್ವಿನಿಕುಮಾರ್ ಉಪಾಧ್ಯಾಯ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.







- Advertisement -
spot_img

Latest News

error: Content is protected !!