Sunday, June 7, 2026
Homeಕರಾವಳಿಉಡುಪಿಉಡುಪಿ; ಪೆರೋಲ್  ಮೇಲೆ ಬಂದು ತಂದೆ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದ ಭೂಗತ ಪಾತಕಿ ಬನ್ನಂಜೆ ರಾಜ

ಉಡುಪಿ; ಪೆರೋಲ್  ಮೇಲೆ ಬಂದು ತಂದೆ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದ ಭೂಗತ ಪಾತಕಿ ಬನ್ನಂಜೆ ರಾಜ

- Advertisement -
- Advertisement -

ಉಡುಪಿ; ಭೂಗತ ಪಾತಕಿ ಬನ್ನಂಜೆ ರಾಜನ ತಂದೆ  ಸುಂದರ ಶೆಟ್ಟಿಗಾರ್ (86) ಅವರು ಏಪ್ರಿಲ್ 27 ರಂದು ನಿಧನರಾಗಿದ್ದು, ತಂದೆ ಅಂತ್ಯ ಸಂಸ್ಕಾರದಲ್ಲಿ  ಬನ್ನಂಜೆ ರಾಜ ಭಾಗಿಯಾಗಿದ್ದಾನೆ.

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಬನ್ನಂಜೆ ರಾಜ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ತಂದೆಯ ನಿಧನದ ಹಿನ್ನೆಲೆ ಆತನಿಗೆ ಕೋರ್ಟ್ 15 ದಿನಗಳ ಪೆರೋಲ್ ಮಂಜೂರು ಮಾಡಿದೆ. ಈ ಹಿನ್ನೆಲೆ  ಬನ್ನಂಜೆ ರಾಜನನ್ನು ಇಂದು ಬಿಗಿ ಭದ್ರತೆಯಲ್ಲಿ ಉಡುಪಿಗೆ ಕರೆತರಲಾಯಿತು.

ಮಲ್ಪೆಯ ಬಾಪುತೋಟದಲ್ಲಿ ನಡೆದ ತಂದೆಯ ಅಂತಿಮ ವಿಧಿವಿಧಾನಗಳಲ್ಲಿ ಬನ್ನಂಜೆ ರಾಜ ಭಾಗಿಯಾಗಿದ್ದಾನೆ. ಮಲ್ಪೆಯ ಹಿಂದೂ ರುದ್ರಭೂಮಿಯಲ್ಲಿ ತಂದೆಯ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಮೇ 14ರ ಒಳಗಾಗಿ ಬನ್ನಂಜೆ ರಾಜ ಪುನಃ ಜೈಲಿಗೆ ಮರಳಬೇಕಿದೆ.

- Advertisement -

Latest News

error: Content is protected !!