Sunday, June 7, 2026
Homeಕರಾವಳಿಮಂಗಳೂರುಮಂಗಳೂರು; ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಕರಾವಳಿಯ ಹಿಂದೂ ಮುಖಂಡರಿಗೆ ಸೋಷಿಯಲ್ ಮೀಡಿಯಾದಲ್ಲಿ ಬೆದರಿಕೆ ಪೋಸ್ಟ್

ಮಂಗಳೂರು; ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಕರಾವಳಿಯ ಹಿಂದೂ ಮುಖಂಡರಿಗೆ ಸೋಷಿಯಲ್ ಮೀಡಿಯಾದಲ್ಲಿ ಬೆದರಿಕೆ ಪೋಸ್ಟ್

- Advertisement -
- Advertisement -

ಮಂಗಳೂರು; ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಕರಾವಳಿಯ ಹಿಂದೂ ಮುಖಂಡರಿಗೆ ಸೋಷಿಯಲ್ ಮೀಡಿಯಾದಲ್ಲಿ ಬೆದರಿಕೆ ಪೋಸ್ಟ್ ಹಾಕಿ ವಿಕೃತಿ ಮೆರೆದಿದ್ದಾರೆ.

ಎಸ್‌ಡಿಪಿಐ ಮುಖಂಡ ಅಶ್ರಫ್‌ ಕಲಾಯಿ ಹ*ತ್ಯೆಯ ಆರೋಪಿಯಾಗಿರುವ, ಹಿಂದೂ ಕಾರ್ಯಕರ್ತನಾಗಿರುವ ಭರತ್ ಕುಮ್ಮೇಲು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಜೀವ ಬೆದರಿಕೆಯನ್ನು ಹಾಕಿದ್ದಾರೆ. ಮೇ 5 ರಂದು ರಾತ್ರಿ 9:30ಕ್ಕೆ ನಿನ್ನ ಸ್ಥಳದಲ್ಲೇ ಬಂದು ಕೊಲೆ ಮಾಡುತ್ತೇವೆ  ಎಂದು ಜೀವ ಬೆದರಿಕೆವುಳ್ಳ ಬರಹವನ್ನು ಹಾಕಿ ಪೋಸ್ಟ್ ಮಾಡಲಾಗಿದೆ.ಸುಹಾಸ್ ಶೆಟ್ಟಿ ಫೋಟೋಗೆ ರೈಟ್ ಮಾರ್ಕ್ ಹಾಕಿ ಪೋಸ್ಟ್ ಹಾಕಿದ್ದು, ಅದರ ಬದಿಯಲ್ಲಿ ಭರತ್‌ ಅವರ ಫೋಟೋವನ್ನು ಹಾಕಲಾಗಿದೆ.

ಭರತ್ ಮಾತ್ರವಲ್ಲದೆ, ಸುಹಾಸ್ ಕೊಲೆ ಬಳಿಕ ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಸೇರಿದಂತೆ 3 ರಿಂದ 5 ಮಂದಿ ಹಿಂದೂ ಮುಖಂಡರಿಗೆ ಜೀವ ಬೆದರಿಕೆಯನ್ನು ಹಾಕಲಾಗಿದೆ ಎನ್ನಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆಯ ಪೋಸ್ಟ್ ವೈರಲ್ ಆಗಿದ್ದು, ಪೊಲೀಸರು ಸಂಬಂಧ ಪಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!