Thursday, May 2, 2024
Homeಕರಾವಳಿಉಡುಪಿಕಾರ್ಕಳ: ಬೆಳ್ಮಣ್‌ ಜಂತ್ರದ ಗುಡ್ಡದಲ್ಲಿ ಖಾಸಗೀ ಏಜೆನ್ಸಿಯಿಂದ ಅನಧಿಕೃತ ಸರ್ವೇ: ಗ್ರಾಮಸ್ಥರಲ್ಲಿ ಹೆಚ್ಚಿದ ಸಂಶಯ

ಕಾರ್ಕಳ: ಬೆಳ್ಮಣ್‌ ಜಂತ್ರದ ಗುಡ್ಡದಲ್ಲಿ ಖಾಸಗೀ ಏಜೆನ್ಸಿಯಿಂದ ಅನಧಿಕೃತ ಸರ್ವೇ: ಗ್ರಾಮಸ್ಥರಲ್ಲಿ ಹೆಚ್ಚಿದ ಸಂಶಯ

spot_img
- Advertisement -
- Advertisement -

ಕಾರ್ಕಳ: ಕಳೆದ ಒಂದು ವಾರದಿಂದ ಬೆಳ್ಮಣ್‌ ಜಂತ್ರದ ಗುಡ್ಡದಲ್ಲಿ ಖಾಸಗೀ ಏಜೆನ್ಸಿಯೊಂದು ಅನಧಿಕೃತವಾಗಿ ಸರ್ವೇ ನಡೆಸುತ್ತಿದೆ. ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಈ ಸರ್ವೇ ನಡೆಸುತ್ತಿರುವವರು ಮಹಾರಾಷ್ಟ್ರ ನಾಗ್ಪುರದ ಮಿನರಲ್ ಎಕ್ಸ್ಪ್ಲೋರೇಶನ್ ಹಾಗೂ ಕನ್ಸಲ್ಟನ್ಸಿ ಲಿಮಿಟೆಡ್ ಖಾಸಗಿ ಸಂಸ್ಥೆಯ ಸಿಬ್ಬಂದಿ ಅನ್ನೋದು ತಿಳಿದುಬಂದಿದೆ. ಆದ್ರೆ ಈ ತಂಡದ ನಡೆ ಗ್ರಾಮಸ್ಥರ ಅನುಮಾನಕ್ಕೆ ಕಾರಣವಾಗಿದೆ. ಇನ್ನು ಸರ್ವೇ ನಡೆಸುವವರಿಗೆ ಸಹಕರಿಸುವಂತೆ ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳ ಕಂದಾಯ ಅಧಿಕಾರಿಗಳಿಗೆ ಅಪಾರ ಜಿಲ್ಲಾಧಿಕಾರಿ ನೀಡಿರುವ ಪತ್ರವೂ ಅವರ ಬಳಿಯಿದೆ..

ಉಡುಪಿಯ ಕೆಲವು ಕಡೆಗಳಲ್ಲಿ ಈಗಾಗಲೇ ಈ ತಂಡ ಸರ್ವೇ ಪೂರೈಸಿದೆ. ಶಿರ್ವ ಬಂಟಕಲ್ಲು ಭಾಗದಲ್ಲಿ ಸರ್ವೇಗೆ ತೊಡಗಿದಾಗ ಗ್ರಾಮಸ್ಥರು ವಿರೋಧ ಮಾಡಿರೋದ್ರಿಂದ ಅಲ್ಲಿಂದ ಕಾಲ್ಕಿತ್ತ ತಂಡ ಬೆಳ್ಮಣ್‌ನಲ್ಲಿ ಸರ್ವೇಗೆ ಮುಂದಾಗಿದೆ.ಇನ್ನು ಈ ಬಗ್ಗೆ ಅಧಿಕಾರಿಗಳು ಕೂಡಾ ಸ್ಪಷ್ಟ ಮಾಹಿತಿ ಕೊಟ್ಟಿಲ್ಲ.

- Advertisement -
spot_img

Latest News

error: Content is protected !!