Thursday, June 4, 2026
Homeಕರಾವಳಿಉಡುಪಿಮಲ್ಪೆ: ಮಕ್ಕಳನ್ನು ಅಪಹರಿಸುತ್ತಿದ್ದಾರೆಂಬ ವದಂತಿಗೆ ಬೆಚ್ಚಿಬಿದ್ದ ಪೋಷಕರು

ಮಲ್ಪೆ: ಮಕ್ಕಳನ್ನು ಅಪಹರಿಸುತ್ತಿದ್ದಾರೆಂಬ ವದಂತಿಗೆ ಬೆಚ್ಚಿಬಿದ್ದ ಪೋಷಕರು

- Advertisement -
- Advertisement -

ಮಲ್ಪೆ: ಮಕ್ಕಳ ಅಪಹರಣಕ್ಕೆ ಯತ್ನ ನಡೆಯುತ್ತಿದೆ ಎಂಬ ವದಂತಿ ಹಬ್ಬಿದ್ದು ಪೋಷಕರು ಆತಂಕಗೊಂಡಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ಮಲ್ಪೆ ವಡಭಾಂಡೇಶ್ವರ ಸಮೀಪ ರಸ್ತೆಯಲ್ಲಿ ಶಾಲಾ ವಾಹನಕ್ಕೆ ಬಾಲಕಿ ಕಾಯ್ತಿದ್ದಾಗ, ಕಾರಿನಲ್ಲಿ ಬಂದ ಮೂವರು ಬಾಲಕಿಗೆ ಚಾಕೋಲೇಟ್‌ ತೋರಿಸಿ ಕಿಡ್ನ್ಯಾಪ್‌ ಮಾಡಲು ಯತ್ನಿಸಿದ್ದಾರೆ. ಆಗ ಬಾಲಕಿ ಕೂಗಿಕೊಂಡಿದ್ದಾಳೆ. ಕೊನೆಗೆ ಅಪಹರಣಕಾರರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಕರಣ ಸಂಬಂಧ ದೂರು ಕೂಡಾ ದಾಖಲಾಗಿದೆ. ಮಕ್ಕಳ ಅಪಹರಣದ ಕುರಿತು ವಾಟ್ಸ್‌ಆ್ಯಪ್‌ನಲ್ಲಿ ಮಾಹಿತಿ ಹರಿದಾಡಿದ್ದು, ಪೋಷಕರು ಭಯಭೀತರಾಗಿದ್ದಾರೆ.

ಆದ್ರೆ ಈ ಬಗ್ಗೆ ಪೊಲೀಸರು ಸ್ಪಷ್ಟನೆ ಕೊಟ್ಟಿದ್ದು ಬಾಲಕಿ ಹೇಳಿದ ಜಾಗ, ಸಮಯ, ಆಕೆ ನಡೆದುಕೊಂಡು ಹೋದ ಜಾಗವನ್ನು ಸಿಸಿ ಕ್ಯಾಮೆರಾದಲ್ಲಿ ಪರಿಶೀಲನೆ ನಡೆಸಿದ್ದೇವೆ. ಅಂತಹ ಘಟನೆ ಯಾವುದು ನಡೆದಿರುವ ಸಾಧ್ಯತೆ ಕಮ್ಮಿ ಇದೆ. . ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮಲ್ಪೆ ಪೊಲೀಸ್ ಠಾಣಾಧಿಕಾರಿ ಶಕ್ತಿವೇಲು ತಿಳಿಸಿದ್ದಾರೆ.

- Advertisement -

Latest News

error: Content is protected !!