Saturday, June 6, 2026
Homeಕರಾವಳಿಉಡುಪಿಉಡುಪಿ; ಜೈಲಿಗೆ ಕರೆದೊಯ್ಯುವಾಗ ಕಳವು ಪ್ರಕರಣದ ಆರೋಪಿ ಪರಾರಿ

ಉಡುಪಿ; ಜೈಲಿಗೆ ಕರೆದೊಯ್ಯುವಾಗ ಕಳವು ಪ್ರಕರಣದ ಆರೋಪಿ ಪರಾರಿ

- Advertisement -
- Advertisement -

ಉಡುಪಿ; ನ್ಯಾಯಾಲಯಕ್ಕೆ ಹಾಜರುಪಡಿಸಿ ವಾಪಾಸ್ಸು ಜೈಲಿಗೆ ಕರೆದೊಯ್ಯುತ್ತಿದ್ದಾಗ ಕಳವು ಪ್ರಕರಣದ ಆರೋಪಿಯೊಬ್ಬ ಪರಾರಿಯಾಗಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.

ಮೊಬೈಲ್ ಅಂಗಡಿಯಲ್ಲಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಭಟ್ಕಳ ಮೂಲದ ಮೊಹಮ್ಮದ್ ರಾಹಿಕ್ (22) ಎಂಬಾತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.  ನ್ಯಾಯಾಂಗ ಬಂಧನಕ್ಕೆ ವಿಧಿಸಿದ್ದರಿಂದ ಹಿರಿಯಡ್ಕದ ಸಬ್ ಜೈಲಿಗೆ ಕರೆದೊಯ್ಯುವಾಗ ಜೈಲ್ ಸಮೀಪದಿಂದ ಇಬ್ಬರು ಪೊಲೀಸರಿಂದ ಆರೋಪಿ ತಪ್ಪಿಸಿಕೊಂಡಿದ್ದಾನೆ.

ಕೆಲ ತಿಂಗಳ ಹಿಂದೆ ಬೀಜಾಡಿ ಸಮೀಪದಲ್ಲಿ ಮೊಬೈಲ್ ಅಂಗಡಿಯಲ್ಲಿ ಕಳವು ಪ್ರಕರಣದಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದರು ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!