Saturday, June 6, 2026
Homeಕರಾವಳಿಮಂಗಳೂರು; ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯ ಸೆರೆ

ಮಂಗಳೂರು; ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯ ಸೆರೆ

- Advertisement -
- Advertisement -

ಮಂಗಳೂರು: ಕದ್ರಿ ಮೈದಾನದ ಕೋರ್ದಬ್ಬು ದೈವಸ್ಥಾನನ ಬಳಿ ಗುರುವಾರ ಮುಂಜಾನೆ ಗಸ್ತು ನಿರತ ಎಸ್ಸೈ ಚಂದ್ರಶೇಖರ್‌ರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದ ಕೇರಳದ ಆಲೆಪ್ಪಿ ಜಿಲ್ಲೆಯ ಕಡಕರಪಳ್ಳಿ ಚೋರ್ ತಾಳ ಗ್ರಾಮದ ಪೇರುವಾಲಿ ಹೌಸ್ ನಿವಾಸಿ ಪಿ.ಎಸ್. ಬೈಜು ಯಾನೆ ಕುಂಬಾರಿ ಬೈಜು ಎಂಬಾತನನ್ನು ಬಂಧಿಸಲಾಗಿದೆ.

ಆರೋಪಿಯು ಅನುಮಾನಾಸ್ಪದವಾಗಿ ವರ್ತಿಸಿದ್ದು, ವಿಚಾರಿಸಿದಾಗ ಸಮರ್ಪಕ ಉತ್ತರ ನೀಡಲಿಲ್ಲ. ಯಾವುದೋ ದುಷ್ಕೃತ್ಯ ನಡೆಸುವ ಉದ್ದೇಶದಿಂದ ಹೊಂಚು ಹಾಕುತ್ತಿರುವ ಬಗ್ಗೆ ಆತನ ವರ್ತನೆಯಿಂದ ಸಂಶಯ ಬಂದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!