Sunday, May 5, 2024
Homeತಾಜಾ ಸುದ್ದಿಕೇರಳ: ಫಿಫಾ ಫುಟ್ಬಾಲ್ ಪಂದ್ಯ ವೀಕ್ಷಿಸಲು ಜೀಪಿನಲ್ಲಿ ಏಕಾಂಗಿಯಾಗಿ ಕತಾರ್ ಗೆ ಹೊರಟ 5 ಮಕ್ಕಳ...

ಕೇರಳ: ಫಿಫಾ ಫುಟ್ಬಾಲ್ ಪಂದ್ಯ ವೀಕ್ಷಿಸಲು ಜೀಪಿನಲ್ಲಿ ಏಕಾಂಗಿಯಾಗಿ ಕತಾರ್ ಗೆ ಹೊರಟ 5 ಮಕ್ಕಳ ತಾಯಿ

spot_img
- Advertisement -
- Advertisement -

ಕೇರಳ;  ಇಲ್ಲಿನ ಮಹಿಳೆಯೊಬ್ಬರು ಫಿಫಾ ಫುಟ್ಬಾಲ್ ವೀಕ್ಷಿಸಲು ಕತಾರ್ ಗೆ ಏಕಾಂಗಿಯಾಗಿ ಜೀಪ್ ನಲ್ಲಿ ಹೊರಟು ಇದೀಗ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ನಾಜಿ ನೌಶಿ ಇಂತಹ ಮಹಾನ್  ಸಾಹಸಕ್ಕೆ ಕೈ ಹಾಕಿದವರು. ಈಕೆಗೆ ಐವರು ಮಕ್ಕಳಿದ್ದಾರೆ. ನೌಶಿ ಓರ್ವ ಯೂಟ್ಯೂಬರ್‌ ಆಗಿದ್ದಾರೆ.

ನೌಶಿಗೆ ಪುಟ್ಬಾಲ್ ಅಂದ್ರೆ ಅಚ್ಚು‌ಮೆಚ್ಚು.ಈ ವರ್ಷ ಕತಾರ್‌ ದೇಶದಲ್ಲಿ ಫುಟ್‌ ಬಾಲ್‌ ಫಿಫಾ ವಿಶ್ವಕಪ್‌ ಜರುಗಲಿದೆ. ಈ ಪಂದ್ಯಗಳನ್ನು ನೋಡಲು ನೌಶಿ ಜೀಪ್‌ ಮೂಲಕ‌‌ ಒಂಟಿಯಾಗಿ ಕತಾರ್ ಗೆ ಹೊರಟಿದ್ದಾರೆ‌. ಮಹೇಂದ್ರ ಥಾರ್‌ ಜೀಪ್‌ ಮೂಲಕ ನೌಶಿ ಕತಾರ್‌ ಗೆ ಫುಟ್ಬಾಲ್‌ ಕ್ರೀಡೆ ನೋಡಲು ಹೊರಟಿದ್ದಾರೆ. ಇವರ ಪಯಣಕ್ಕೆ ಕೇರಳ ಸಾರಿಗೆ ಸಚಿವ ಆಂಟನಿ ರಾಜು ಸಮ್ಮುಖದಲ್ಲಿ ಹಸಿರು ನಿಶಾನೆ ದೊರೆತಿದೆ.

ನೌಶಿ ತಮ್ಮ ಜೀಪ್‌ ನಲ್ಲಿ ಕೊಯಮತ್ತೂರು ಮೂಲಕ ಮುಂಬೈಗೆ ತಲುಪಿ ಅಲ್ಲಿಂದ‌ ಹಡಗಿನಲ್ಲಿ ಜೀಪ್‌ ಸಹಿತ ಒಮಾನ್‌ ತೆರಳಲಿದ್ದಾರೆ. ಅಲ್ಲಿಂದ ನೌಶಿ ಜೀಪ್‌ ನಲ್ಲಿ ಅರಬ್‌ ದೇಶದ ಯುಎಇ, ಬಹ್ರೈನ್‌, ಕುವೈಟ್‌ ಹಾಗೂ ಸೌದಿ ಆರೇಬಿಯಾದಲ್ಲಿ ಸಂಚರಿಸಿ ಕತಾರ್‌ ತಲುಪಲಿದ್ದಾರೆ.

ಈ ಬಗ್ಗೆ ಮಾತಾನಾಡಿದ ನೌಶಿ “ನಾನು ಡಿಸೆಂಬರ್‌ 10 ಕ್ಕೆ ಕತಾರ್‌ ತಲುಪಿ ಫೈನಲ್‌ ಮ್ಯಾಚ್‌ ನೋಡಬೇಕೆಂದಿದ್ದೇನೆ. ನಾನು ಅರ್ಜೆಂಟಿನಾ ತಂಡ ಹಾಗೂ ಮೆಸ್ಸಿ ಅವರ ದೊಡ್ಡ ಅಭಿಮಾನಿ. ನನ್ನ ಮೆಚ್ಚಿನ ತಂಡ ಕಪ್‌ ಎತ್ತುವುದನ್ನು ನೋಡಲು ಕಾಯುತ್ತಿದ್ದೇನೆ.ಜೀಪ್‌ ನಲ್ಲಿ ಅಡುಗೆ ಸಾಮಾಗ್ರಿಗಳೆಲ್ಲಾ ಇವೆ. ಪೆಟ್ರೋಲ್‌ ಬಂಕ್‌, ಟೋಲ್‌ ಪ್ಲಾಜಾದಲ್ಲಿ ರಾತ್ರಿಯ ವೇಳೆ ಜೀಪ್ ನಿಲ್ಲಿಸುವ ಯೋಜನೆಯಿದೆ.ನನ್ನ ಬಳಿ ಓಮಾನ್‌ ದೇಶದ ಡ್ರೈವಿಂಗ್‌ ಲೈಸನ್ಸ್‌ ಇದೆ.ಭಾರತ ತಂಡ ಫಿಫಾದಲ್ಲಿ ಆಡುವುದನ್ನು ನೋಡುವುದು ನನ್ನ ಕನಸು. ಈ ಪಯಣಕ್ಕೆ ನನ್ನ ಗಂಡ ಹಾಗೂ ನನ್ನ ಮಕ್ಕಳೇ ನನ್ನ ಬೆನ್ನುಲುಬು ಎಂದಿದ್ದಾರೆ.

- Advertisement -
spot_img

Latest News

error: Content is protected !!