Saturday, June 6, 2026
Homeಕರಾವಳಿಬಂಟ್ವಾಳ; ಮೂವರು ಮಕ್ಕಳಿಗೆ ಜನ್ಮ ನೀಡಿದ ತಾಯಿ

ಬಂಟ್ವಾಳ; ಮೂವರು ಮಕ್ಕಳಿಗೆ ಜನ್ಮ ನೀಡಿದ ತಾಯಿ

- Advertisement -
- Advertisement -

ಬಂಟ್ವಾಳ; ಮಹಿಳೆಯೊಬ್ಬರು  ಮೂರು ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ  ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಗಾಣದಪಾಲು ಎಂಬಲ್ಲಿ ನಡೆದಿದೆ.

ಗಾಣದಪಾಲು ನಿವಾಸಿ ಪದ್ಮನಾಭ ಪೂಜಾರಿಯವರ ಪತ್ನಿ ದೀಕ್ಷಿತಾ ಅಕ್ಟೋಬರ್ 19 ರಂದು ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಮೊದಲು ಗಂಡು ಮಗುವಿಗೆ ಜನ್ಮ ನೀಡಿದ ದೀಕ್ಷಿತಾ ಬಳಿಕ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಡಾ. ವಿನೀತಾ ಶೆಟ್ಟಿ ಅವರ ತಂಡ ಸಿಸೇರಿಯನ್ ಮೂಲಕ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!