Tuesday, April 30, 2024
Homeಕರಾವಳಿಕಡಬ:  ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶಿಲ್ಪಾ ವಿಧಿವಶ

ಕಡಬ:  ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶಿಲ್ಪಾ ವಿಧಿವಶ

spot_img
- Advertisement -
- Advertisement -

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿಯಾಗಿದ್ದ ಶಿಲ್ಪಾ (33) ಅವರು ಮೆದುಳಿನ ನರ ದೌರ್ಬಲ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಒಟ್ಲ ನಿವಾಸಿ ದೇವರಾಜ್ ಹಾಗೂ ಜಾನಕಿ ದಂಪತಿ ಪುತ್ರಿ ಯಾಗಿರುವ ಅವರು  ಕಳೆದ ಹಲವು ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಐವರು  ಪುತ್ರಿಯರಲ್ಲಿ ಕೊನೆಯವರಾಗಿದ್ದ ಶಿಲ್ಪಾ ಮನೆಗೆ ಆಧಾರವಾಗಿದ್ದರು.

ಅವರು ಕಳೆದ 9 ತಿಂಗಳಿನಿಂದ ಮೆದುಳಿನ ನರ ದೌರ್ಬಲ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಇವರ ಚಿಕಿತ್ಸೆಗಾಗಿ ಹಲವು ಸಂಘ-ಸಂಸ್ಥೆಗಳು ನೆರವಾಗಿದ್ದವು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಇವರ ನಿಧನಕ್ಕೆ ಯೋಜನೆಯ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

- Advertisement -
spot_img

Latest News

error: Content is protected !!