Sunday, October 18, 2026
Homeಪ್ರಮುಖ-ಸುದ್ದಿಬಾಲಿವುಡ್ ನಟ ಅಜಯ್ ದೇವಗನ್ ಮೇಲೆ ಅನಧಿಕೃತ ನಿರ್ಮಾಣ ಕಾಮಗಾರಿ ನಡೆಸಿದ ಆರೋಪ; ...

ಬಾಲಿವುಡ್ ನಟ ಅಜಯ್ ದೇವಗನ್ ಮೇಲೆ ಅನಧಿಕೃತ ನಿರ್ಮಾಣ ಕಾಮಗಾರಿ ನಡೆಸಿದ ಆರೋಪ; ಬಂಗ್ಲೆಯ ಕೆಲವು ಭಾಗಗಳು ತೆರವು

- Advertisement -
- Advertisement -

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಅವರ ಮುಂಬೈನ ಜುಹು ಪ್ರದೇಶದಲ್ಲಿರುವ ಬಂಗ್ಲೆಯಲ್ಲಿ ಅನಧಿಕೃತ ನಿರ್ಮಾಣ ಕಾಮಗಾರಿ ನಡೆಸಿದ ಆರೋಪದ ಮೇಲೆ ಬೃಹತ್ ಮುಂಬೈ ಮಹಾನಗರ ಪಾಲಿಕೆ ಕ್ರಮ ಕೈಗೊಂಡಿದೆ. ಬಂಗ್ಲೆಯ ಕೆಲವು ಭಾಗಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಕಪೋಲ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿರುವ ಈ ಬಂಗ್ಲೆಯಲ್ಲಿ ಅನುಮತಿ ಪಡೆಯದೆ ಗೋಡೆಗಳ ನಿರ್ಮಾಣ, ಕಿಟಕಿಗಳ ಬದಲಾವಣೆ ಸೇರಿದಂತೆ ಹಲವು ಕಾಮಗಾರಿಗಳನ್ನು ನಡೆಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಈ ಕುರಿತು ಸೆಪ್ಟೆಂಬರ್ 10ರಂದು ಬಿಎಂಸಿ ನೋಟಿಸ್ ಜಾರಿ ಮಾಡಿ, ಕಾಮಗಾರಿ ನಿಲ್ಲಿಸುವಂತೆ ಸೂಚಿಸಿತ್ತು. ಆದರೆ, ಕಾಮಗಾರಿ ಮುಂದುವರಿದ ಹಿನ್ನೆಲೆಯಲ್ಲಿ ಅಕ್ಟೋಬರ್ 17ರಂದು ಅಧಿಕಾರಿಗಳು ಬಂಗ್ಲೆಯ ಕೆಲವು ಭಾಗಗಳನ್ನು ತೆರವುಗೊಳಿಸಿದ್ದಾರೆ.

ಇನ್ನೊಂದೆಡೆ, ಅನುಮತಿ ಪಡೆಯದೆ ಕಾಮಗಾರಿ ನಡೆಸಲಾಗಿದೆ ಎಂಬ ಆರೋಪವನ್ನು ಅಜಯ್ ದೇವಗನ್ ಅವರ ಪ್ರತಿನಿಧಿಗಳು ತಳ್ಳಿಹಾಕಿದ್ದಾರೆ.

ಇನ್ನು, ಅಜಯ್ ದೇವಗನ್ ಅಭಿನಯದ ‘ದೃಶ್ಯಂ 3’ ಚಿತ್ರವು ಬಿಡುಗಡೆಯಾದ ಎರಡು ವಾರಗಳಲ್ಲಿ 300 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ ಎಂದು ವರದಿಯಾಗಿದೆ.

- Advertisement -

Latest News

error: Content is protected !!