Sunday, October 18, 2026
Homeಕರಾವಳಿಬೇಕರಿ ಉತ್ಪನ್ನಗಳನ್ನು ಮರುಪ್ಯಾಕ್ ಮಾಡಿ ಮಾರಾಟ; ಮಂಗಳೂರಿನ ಆಹಾರೋದ್ಯಮಗಳ ಮೇಲೆ ಆಹಾರ ಇಲಾಖೆಯಿಂದ ದಾಳಿ

ಬೇಕರಿ ಉತ್ಪನ್ನಗಳನ್ನು ಮರುಪ್ಯಾಕ್ ಮಾಡಿ ಮಾರಾಟ; ಮಂಗಳೂರಿನ ಆಹಾರೋದ್ಯಮಗಳ ಮೇಲೆ ಆಹಾರ ಇಲಾಖೆಯಿಂದ ದಾಳಿ

- Advertisement -
- Advertisement -

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ಸೂಚನೆಯಂತೆ, ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ನೇತೃತ್ವದ ತಂಡವು ಶನಿವಾರ ಮಂಗಳೂರಿನ ಆಹಾರೋದ್ಯಮಗಳ ಮೇಲೆ ದಾಳಿ ನಡೆಸಿತು.

ಫಳ್ನೀರ್ ಜಂಕ್ಷನ್‌ನ ಜಿ.ಐ. ಬೇಕರಿಯಲ್ಲಿ ಬೇಕರಿ ಉತ್ಪನ್ನಗಳನ್ನು ಮರುಪ್ಯಾಕ್ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಯಿತು. ತಯಾರಿಕಾ ದಿನಾಂಕ, ಬಳಕೆಯ ಕೊನೆಯ ದಿನಾಂಕ, ಬ್ಯಾಚ್ ನಂಬರ್ ಹಾಗೂ ಎಫ್‌ಎಸ್‌ಎಸ್‌ಎಐ ಪರವಾನಗಿ ಸಂಖ್ಯೆ ಇಲ್ಲದ ಆಹಾರ ಉತ್ಪನ್ನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ಮುದ್ರೆ ಹಾಕಿದರು.

- Advertisement -

Latest News

error: Content is protected !!