Friday, June 5, 2026
Homeಕರಾವಳಿಉಡುಪಿಉಡುಪಿ: ನಸುಕಿನವೇಳೆ ದ್ವಿಚಕ್ರ ವಾಹನ ಸವಾರನನ್ನು ದೋಚಿದ ದರೋಡೆಕೋರರು..!

ಉಡುಪಿ: ನಸುಕಿನವೇಳೆ ದ್ವಿಚಕ್ರ ವಾಹನ ಸವಾರನನ್ನು ದೋಚಿದ ದರೋಡೆಕೋರರು..!

- Advertisement -
- Advertisement -

ಉಡುಪಿ: ಇಲ್ಲಿನ ಇಂದ್ರಾಳಿ ಪೆಟ್ರೋಲ್ ಬಂಕ್ ಬಳಿ ದ್ವಿಚಕ್ರ ವಾಹನ ಸವಾರನಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆಕೋರರು ಹಣ ಮತ್ತು ಮೊಬೈಲ್ ಫೋನ್ ದೋಚಿದ್ದಾರೆ. ಶನಿವಾರ ಮುಂಜಾನೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಉದ್ಯೋಗಿಯಾಗಿರುವ ದ್ವಿ ಚಕ್ರ ವಾಹನ ಸವಾರ ನಿತೇಶ್ ದೇವಾಡಿಗ ಅವರು ರೈಲ್ವೆ ನಿಲ್ದಾಣದಿಂದ ಸ್ಕೂಟರ್‌ನಲ್ಲಿ ತೆರಳುತ್ತಿದ್ದವೇಳೆ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರನ್ನು ತಡೆದು ಹಲ್ಲೆ ನಡೆಸಿ 19,000 ರೂ.ಗಳ ನಗದು ಮತ್ತು ಮೊಬೈಲ್ ಫೋನ್ ದೋಚಿದ್ದಾರೆ. ಘಟನೆವೇಳೆ ನಿತೇಶ್ ದೇವಾಡಿಗ ಅವರ ಎದೆಗೆ ಗಾಯವಾಗಿದೆ.

ಮಣಿಪಾಲ್ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಣಿಪಾಲ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್ ಅವರು, ಅಪರಾಧ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ದರೋಡೆಕೋರರ ತಂಡವು ಪಟ್ಟಣದಲ್ಲಿ ಕಾರ್ಯಾಚರಿಸುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆನಡೆಸಿ ತನಿಖೆ ನಡೆಸಲಾಗುವುದು ಎಂದರು.

- Advertisement -

Latest News

error: Content is protected !!