Thursday, June 4, 2026
Homeಕರಾವಳಿಉಡುಪಿಕೇರಳ ತುಳು ಅಕಾಡೆಮಿಯ ತುಳುಭವನದ ಉದ್ಘಾಟನಾ ಸಮಾರಂಭ: ಆನ್ ಲೈನ್ ಮೂಲಕ ಕಟ್ಟಡ ಲೋಕಾರ್ಪಣೆ

ಕೇರಳ ತುಳು ಅಕಾಡೆಮಿಯ ತುಳುಭವನದ ಉದ್ಘಾಟನಾ ಸಮಾರಂಭ: ಆನ್ ಲೈನ್ ಮೂಲಕ ಕಟ್ಟಡ ಲೋಕಾರ್ಪಣೆ

- Advertisement -
- Advertisement -

ಕಾಸರಗೋಡು: ಮಂಜೇಶ್ವರ ಹೊಸಂಗಡಿ ಸಮೀಪ ನಿರ್ಮಿಸಿರುವ ಕೇರಳ ತುಳು ಅಕಾಡೆಮಿಯ ತುಳುಭವನದ ಉದ್ಘಾಟನಾ ಸಮಾರಂಭ ನಡೆಯಿತು. ಕೇರಳ ಸಾಂಸ್ಕೃತಿಕ ಸಚಿವ ಎ.ಕೆ ಬಾಲನ್‌ ಅವರು ಆನ್ ಲೈನ್ ಮೂಲಕ ಕಟ್ಟಡ ಲೋಕಾರ್ಪಣೆಗೊಳಿಸಿದರು.ಕಾರ್ಯಕ್ರಮದಲ್ಲಿ ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು.

ತುಳು ಲಿಪಿ ಆನ್ ಲೈನ್ ತರಬೇತಿಯ ಉದ್ಘಾಟನೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ. ಜಿ.ಸಿ ಬಶೀರ್ ನೆರವೇರಿಸಿದರು.ಜೊತೆಗೆ ಕೊರೊನಾ ನಿಯಂತ್ರಣ ಕುರಿತ ತುಳು ಸಾಕ್ಷ್ಯ ಚಿತ್ರವನ್ನು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ.ಆರ್ ಜಯಾನಂದ ಬಿಡುಗಡೆಗೊಳಿಸಿದರು.

ಸಂಶೋಧಕ ಡಾ. ವೆಂಕಟರಾಜ ಪುಣಿಂಚಿತ್ತಾಯ ಅವರ ಹೆಸರಿನ ಗ್ರಂಥಾಲಯವನ್ನು ಶಾಸಕ ಎಂ. ಸಿ ಕಮರುದ್ದೀನ್, ಸಭಾಂಗಣವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ. ಜಿ. ಸಿ ಬಶೀರ್ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು, ಅಕಾಡೆಮಿ ಅಧ್ಯಕ್ಷ ಉಮೇಶ್ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!