- Advertisement -
![]()
- Advertisement -
ಬೆಳ್ಳಾರೆ: ನೆಟ್ಟಾರು ನಿವಾಸಿ ಲಕ್ಷ್ಮೀಶ ಕಿನ್ನಿಮಜಲು(34) ಎಂಬವರು ತಮ್ಮ ಮನೆಯ ಹಿಂಬಾಗದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ಬೆಳ್ಳಾರೆ ಆಟೋ ಸ್ಟ್ಯಾಂಡ್ ನಲ್ಲಿ ನಾಗಶ್ರೀ ಹೆಸರಿನ ಆಟೋ ಹೊಂದಿದ್ದ ಇವರು ನಿನ್ನೆ ಎಂದಿನಂತೆ ಕೆಲಸಕ್ಕೆ ಹೋಗಿದ್ದರು.
ರಾತ್ರಿ ಮನೆಗೆ ಬಂದ ನಂತರ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆತ್ಮಹತ್ಯೆಗೆ ನಿರ್ದಿಷ್ಟವಾದ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
- Advertisement -


