Sunday, June 7, 2026
Homeಕರಾವಳಿಉಡುಪಿಉಡುಪಿ: ಫೆ.7ಕ್ಕೆ ಜಿಲ್ಲಾ ರೈತ ಸಮಾವೇಶ ಕಾರ್ಯಕ್ರಮ

ಉಡುಪಿ: ಫೆ.7ಕ್ಕೆ ಜಿಲ್ಲಾ ರೈತ ಸಮಾವೇಶ ಕಾರ್ಯಕ್ರಮ

- Advertisement -
- Advertisement -

ಉಡುಪಿ: ಇಲ್ಲಿನ ಕೃಷಿಕ ಸಂಘದಿಂದ ಫೆ.7ರಂದು ಬೆಳಿಗ್ಗೆ 9.30ಕ್ಕೆ ಕುಂಜಿಬೆಟ್ಟು ಶಾರದಾ ಮಂಟಪದಲ್ಲಿ ಜಿಲ್ಲಾ ರೈತ ಸಮಾವೇಶ ಆಯೋಜನೆಗೆ ಯೋಜನೆ ರೂಪಿಸಿದೆ.ಸಮಾವೇಶದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ನಡೆಸಲಿದ್ದಾರೆ. ಚಿಂತಕ ತೀರ್ಥಹಳ್ಳಿ ಶ್ರೀಧರಮೂರ್ತಿ ದಿಕ್ಸೂಚಿ ಭಾಷಣ ಮಾಡಲಿದ್ದು ಸಮಾವೇಶವು 12ರಿಂದ ನಡೆಯಲಿದ್ದು ಕೃಷಿ ವಿಚಾರ ಗೋಷ್ಠಿಗಳು ನಡೆಯಲಿವೆ.

ಅಡಿಕೆ ರೋಗ ನಿರ್ವಹಣಾ ತಾಂತ್ರಿಕತೆ ಕುರಿತು ಡಾ.ಧನಂಜಯ,ಉತ್ತಮ ಗೇರು ತಳಿ ಮತ್ತು ಬೆಳೆ ತಾಂತ್ರಿಕತೆ ಬಗ್ಗೆ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಡಾ.ಲಕ್ಷ್ಮಣ್ ಸೇರಿ ಹಲವು ವಿಷಯಗಳ ಕುರಿತು ಕಾರ್ಯಾಗಾರ ನಡೆಯಲಿದೆ.

- Advertisement -

Latest News

error: Content is protected !!