Saturday, April 20, 2024
Homeತಾಜಾ ಸುದ್ದಿಮುಂಬೈ: ಹೊತ್ತಿ ಉರಿದ ಪ್ರಭಾಸ್ ನಟನೆಯ 'ಆದಿ ಪುರುಷ್' ಸಿನಿಮಾ ಸೆಟ್

ಮುಂಬೈ: ಹೊತ್ತಿ ಉರಿದ ಪ್ರಭಾಸ್ ನಟನೆಯ ‘ಆದಿ ಪುರುಷ್’ ಸಿನಿಮಾ ಸೆಟ್

spot_img
- Advertisement -
- Advertisement -

ಮುಂಬೈ: ನಗರದ ಗೋರೆಗಾಂವ್​​ನಲ್ಲಿರುವ ಸ್ಟುಡಿಯೋ ಒಂದರಲ್ಲಿ ಪ್ರಭಾಸ್ ಅಭಿನಯದ ಆದಿ ಪುರುಷ್ ಸಿನಿಮಾದ ಸೆಟ್ ಹಾಕಲಾಗಿದ್ದು, ಇಲ್ಲಿ ಇಂದು ಸಂಜೆ ಅಗ್ನಿ ಅವಘಡ ಸಂಭವಿಸಿದೆ. ಗೋರೆಗಾಂವ್​ನ ಇನಾರ್ಬಿಟ್​ ಮಾಲ್​ ಸಮೀಪದಲ್ಲಿರುವ ರೆಟ್ರೋ ಗ್ರೌಂಡ್ಸ್ ಎಂಬ ಹೆಸರಾಂತ ಸ್ಟುಡಿಯೋದಲ್ಲಿ ಈ ಅಗ್ನಿ ಅವಗಢ ಸಂಭವಿಸಿದೆ.

ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂಬುದು ತಿಳಿದು ಬಂದಿಲ್ಲ. ಈ ಘಟನೆ ನಡೆದಾಗ ಸುಮಾರು 50 ರಿಂದ 60 ಮಂದಿ ಸೆಟ್ ಬಾಯ್ ಗಳು ಕೆಲಸ ಮಾಡುತ್ತಿದ್ದರು. ಅದೃಷ್ಟವಶಾತ್ ಈವರೆಗೆ ಯಾವುದೇ ರೀತಿಯ ಸಾವು ನೋವು ಸಂಭವಿಸಿರುವ ವರದಿಯಾಗಿಲ್ಲ.

ಈಗಾಗಲೇ 8 ಅಗ್ನಿಶಾಮಕ ವಾಹನಗಳು, 5 ಜಂಬೊ ಟ್ಯಾಂಕರ್ ಗಳು, ಒಂದು ನೀರಿನ ಟ್ಯಾಂಕರ್ ಮತ್ತು ಒಂದು ಜೆಸಿಬಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ ಎಂದು ಮುಂಬೈ ಫೈರ್ ಬ್ರಿಗೇಡ್ ನ ಮೂಲಗಳು ತಿಳಿಸಿವೆ.

- Advertisement -
spot_img

Latest News

error: Content is protected !!