Friday, June 5, 2026
Homeತಾಜಾ ಸುದ್ದಿಲಂಚ ‍ಪಡೆದ ಆರೋಪದಲ್ಲಿ ಐಪಿಎಸ್‌ ಅಧಿಕಾರಿ ಬಂಧನ- ಅಧಿಕಾರಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದದ್ದು...

ಲಂಚ ‍ಪಡೆದ ಆರೋಪದಲ್ಲಿ ಐಪಿಎಸ್‌ ಅಧಿಕಾರಿ ಬಂಧನ- ಅಧಿಕಾರಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದದ್ದು ಹೇಗೆ?

- Advertisement -
- Advertisement -

ಜೈಪುರ: ಇಲ್ಲಿನ ಐಪಿಎಸ್‌ ಅಧಿಕಾರಿ ಮನೀಷ್‌ ಅಗರ್‌ವಾಲ್‌ ಲಂಚ ‍ಪಡೆದ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದಿಂದ ಬಂಧನಕ್ಕೆ ಒಳಗಾಗಿದ್ದಾರೆ.2010ರ ಬ್ಯಾಚಿನ ಐಪಿಎಸ್‌ ಅಧಿಕಾರಿಯಾಗಿರುವ ಮನೀಷ್‌ ಪ್ರಸ್ತುತ ರಾಜ್ಯ ವಿಪತ್ತು ನಿರ್ಮಹಣಾ ಪಡೆಯ ಕಮಾಂಡೆಂಟ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರು ಅಧಿಕಾರಿಗಳ ಪರವಾಗಿ ಕಟ್ಟಡ ನಿರ್ಮಾಣ ಕಂಪನಿಯೊಂದರಿಂದ ಹಣಕ್ಕಾಗಿ ಬೇಡಿಕೆಯಿಟ್ಟ ಆರೋಪದ ಮೇರೆಗೆ ಜನವರಿ 13ರಂದು ಪೆಟ್ರೋಲ್‌ ಪಂಪ್‌ ಮಾಲೀಕ ನೀರಜ್‌ ಮೀನ ಎಂಬವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ಮನೀಷ್‌ ಅಗರ್‌ವಾಲ್‌ ಅವರ ಹೆಸರೂ ಕೇಳಿಬಂದಿದ್ದು ಬಂಧಿಸಿ ತನಿಖೆಗೊಳಪಡಿಸಲಾಗಿದೆ.

- Advertisement -

Latest News

error: Content is protected !!