Saturday, June 6, 2026
Homeತಾಜಾ ಸುದ್ದಿನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋಗಿ ಬಾಲಕನೊಂದಿಗೆ ಮಹಿಳೆಯೂ ನೀರುಪಾಲು

ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋಗಿ ಬಾಲಕನೊಂದಿಗೆ ಮಹಿಳೆಯೂ ನೀರುಪಾಲು

- Advertisement -
- Advertisement -

ರಾಮನಗರ: ಜಮೀನು ಬಳಿಯ ಹೊಂಡದಲ್ಲಿ ನೀರು ಪಾಲಾಗುತ್ತಿದ್ದ ಬಾಲಕನನ್ನು ರಕ್ಷಿಸಲು ಮುಂದಾಗಿ ಬಾಲಕನೊಂದಿಗೆ ಮಹಿಳೆ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕನಕಪುರದ ಹುಣಸೆಮರದದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಕಸಬಾ ಹೋಬಳಿಯ ಹುಣಸೆಮರದದೊಡ್ಡಿ ಗ್ರಾಮದ ದೀಪು (11) ಹಾಗೂ ಆತನ ಸಂಬಂಧಿಯಾದ ಭಾರತಿ (30) ನೀರುಪಾಲಾದ ದುರ್ದೈವಿಗಳು. ಜಮೀನು ಬಳಿಯ ಹೊಂಡದಲ್ಲಿ ಹಸುವಿನ ಮೈತೊಳೆಯಲು ಹೋಗಿದ್ದ ಬಾಲಕ ನೀರು ಪಾಲಾಗುತ್ತಿದ್ದಾಗ ಭಾರತಿ ಆತನನ್ನು ರಕ್ಷಣೆ ಮಾಡಲು ಹೋಗಿದ್ದರು. ಆಗ ಇಬ್ಬರೂ ಕೆಸರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹೊಂಡದ ಕೆಸರಿನಲ್ಲಿ ಸಿಲುಕಿ ಇಬ್ಬರು ಮುಳುಗುತ್ತಿದ್ದಾಗ ಅಲ್ಲಿದ್ದ ಜನರು ರಕ್ಷಣೆ ಮಾಡಲ ಪ್ರಯತ್ನ ನಡೆಸಿದ್ದಾರೆ. ಆದರೆ, ಇಬ್ಬರೂ ನೀರಿನಲ್ಲಿ ಮುಳುಗಿದರು ಎಂದು ಸ್ಥಳೀಯರು ಹೇಳಿದ್ದಾರೆ.

- Advertisement -

Latest News

error: Content is protected !!