Thursday, June 4, 2026
Homeಕರಾವಳಿಉಡುಪಿಉಡುಪಿ ಜಿಲ್ಲಾಡಳಿತದ ಮುಂದೆ ಡಾನ್‌ಗಳ ಆಟ ನಡೆಯೊಲ್ಲ: ಜಿ.ಜಗದೀಶ್ ಗರಂ

ಉಡುಪಿ ಜಿಲ್ಲಾಡಳಿತದ ಮುಂದೆ ಡಾನ್‌ಗಳ ಆಟ ನಡೆಯೊಲ್ಲ: ಜಿ.ಜಗದೀಶ್ ಗರಂ

- Advertisement -
- Advertisement -

ಉಡುಪಿ: ಕೆಲವು ಕಿಡಿಗೇಡಿಗಳು ಮಂಬೈನಲ್ಲಿ ಕುಳಿತು ಡಾನ್ ರೀತಿಯಲ್ಲಿ‌ ಖಾಸುಮ್ಮನೆ ಕರೆ ಮಾಡಿ ಆಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಇಂತಹ ಕೃತ್ಯಗಳು ಮತ್ತೆ ಮರುಕಳಿಸಿದರೆ ಮುಲಾಜಿಲ್ಲದೆ ಜೈಲಿಗೆ ಹಾಕಲಾಗುವುದು. ಬಾಂಬೆಯಲ್ಲಿದ್ದರೂ ಅವರನ್ನು ಕರೆಸಿಕೊಳ್ಳುವುದು ಜಿಲ್ಲಾಡಳಿತಕ್ಕೆ ಗೊತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.

‘ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾಡಳಿತ ಮೂರು ತಿಂಗಳಿನಿಂದ ಹಗಲಿರುಳು ಶ್ರಮಿಸುತ್ತಿದೆ. ಆದರೂ, ಜಿಲ್ಲಾಧಿಕಾರಿ, ಎಸ್‌ಪಿ, ಎಸಿ, ಎಂಪಿ ಎಂಎಲ್‌ಎಗಳಿಗೆ ನಿಂಧಿಸುತ್ತಿದ್ದು, ಸುಮ್ಮನಿರಲು ಸಾಧ್ಯವಿಲ್ಲ. ಎಷ್ಟೆ ದೊಡ್ಡ ವ್ಯಕ್ತಿಯಾದರೂ ಜೈಲಿಗೆ ಹಾಕುತ್ತೇನೆ’ ಎಂದು ಖಡಕ್ ಜಿ.ಜಗದೀಶ್ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಕೊರೊನಾ ವಿರುದ್ಧದ ಸಮರ ನಿರಂತರವಾಗಿ ಮುಂದುವರಿಯಲಿದೆ. ಇನ್ನೂ 500 ಪ್ರಕರಣಗಳಾದರೂ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಶಕ್ತವಾಗಿದೆ. ಆರೋಗ್ಯಕರ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಲಾಗುವುದು. ಆದರೆ, ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದರು.

- Advertisement -

Latest News

error: Content is protected !!