Friday, May 17, 2024
Homeಕರಾವಳಿಕಡಂದಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ ಕೊರೋನಾ ಸೋಂಕು ಪಾಸಿಟಿವ್

ಕಡಂದಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ ಕೊರೋನಾ ಸೋಂಕು ಪಾಸಿಟಿವ್

spot_img
- Advertisement -
- Advertisement -

ಮೂಡಬಿದಿರೆ: ತಾಲೂಕಿನ ಕಡಂದಲೆಯಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. 2 ದಿನಗಳ ಹಿಂದೆ ಮುಂಬೈನಿಂದ ಸಹೋದರರ ಜೊತೆಗೆ ಊರಿಗೆ ಆಗಮಿಸಿದ್ದ 55 ವರ್ಷದ ಆ ವ್ಯಕ್ತಿಯನ್ನು ನಿಯಮದಂತೆ ಕಡಂದಲೆಯ ಸರಕಾರಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

ಆದರೆ, ಅಂದೇ ರಾತ್ರಿ ಶಾಲೆಯ ಜಗುಲಿಯ ಪಕ್ಕಾಸಿಗೆ ಬಟ್ಟೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಗುರುವಾರ ಮುಂಜಾನೆ ಈ ಘಟನೆ ಬೆಳಕಿಗೆ ಬಂದಿತ್ತು.

ಮೃತರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆಂದು ಕಳುಹಿಸಲಾಗಿತ್ತು. ಈ ವರದಿಯು ಶುಕ್ರವಾರದಂದು ಜಿಲ್ಲಾಡಳಿತದ ಕೈ ಸೇರಿದ್ದು, ವರದಿಯಲ್ಲಿ ಮೃತ ವ್ಯಕ್ತಿಗೆ ಕೋವಿಡ್ ಸೋಂಕು ಇದ್ದಿದ್ದು ದೃಢಪಟ್ಟಿತ್ತು.

- Advertisement -
spot_img

Latest News

error: Content is protected !!