Friday, May 17, 2024
Homeತಾಜಾ ಸುದ್ದಿಪ್ರಧಾನಿ ನರೇಂದ್ರ ಮೋದಿ : ಪಶ್ಚಿಮ ಬಂಗಾಳ ಆಂಫಾನ್ ಚಂಡಮಾರುತ ಹಾನಿ ಪ್ರದೇಶ ಸಮೀಕ್ಷೆ, 1...

ಪ್ರಧಾನಿ ನರೇಂದ್ರ ಮೋದಿ : ಪಶ್ಚಿಮ ಬಂಗಾಳ ಆಂಫಾನ್ ಚಂಡಮಾರುತ ಹಾನಿ ಪ್ರದೇಶ ಸಮೀಕ್ಷೆ, 1 ಸಾವಿರ ಕೋಟಿ ರೂ. ನೆರವು ಘೋಷಣೆ

spot_img
- Advertisement -
- Advertisement -

ಕೋಲ್ಕತ್ತಾ:ಪಶ್ಚಿಮ ಬಂಗಾಳದ ಆಂಫಾನ್ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೈಮಾನಿಕ ಸಮೀಕ್ಷೆ ನಡೆಸಿದರು. ಸಮೀಕ್ಷೆ ನಡೆಸಿದ ಬಳಿಕ ಪ್ರಧಾನಿ ಮಧ್ಯಂತರವಾಗಿ ಒಂದು ಸಾವಿರ ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಆಂಫಾನ್ ಭೀಕರ ಚಂಡಮಾರುತದಲ್ಲಿ 80 ಮಂದಿ ಸಾವನ್ನಪ್ಪಿದ್ದರು. ಅಲ್ಲದೇ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿತ್ತು. ವೈಮಾನಿಕ ಸಮೀಕ್ಷೆ ವೇಳೆ ಪ್ರಧಾನಿ ಜತೆ ಸಿ.ಯಂ ಮಮತಾ ಬ್ಯಾನರ್ಜಿ, ಗವರ್ನರ್ ಜಗದೀಪ್ ಸಾಥ್ ನೀಡಿದ್ದರು ಎಂದು ವರದಿ ತಿಳಿಸಿದೆ.
ಪಶ್ಚಿಮಬಂಗಾಳಕ್ಕೆ ಮುಂಗಡವಾಗಿ ಒಂದು ಸಾವಿರ ಕೋಟಿ ರೂಪಾಯಿ ಪರಿಹಾರ ನೀಡಿರುವುದಾಗಿ ಪ್ರಧಾನಿ ಮೋದಿ ಉತ್ತರ 24ನೇ ಪರಾಗಣ್ ನ ಬಾಸಿರಾತ್ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ ಬಳಿಕ ತಿಳಿಸಿದರು. ಆಂಫಾನ್ ನಿಂದ ಹಾನಿಗೊಳಗಾದವರಿಗೆ ಮನೆ ಕಳೆದುಕೊಂಡವರಿಗೆ, ಹಾನಿಗೊಂಡವರಿಗೆ ನೆರವು ನೀಡಲಾಗುವುದು ಎಂದರು.
ಇಂತಹ ಅಗ್ನಿಪರೀಕ್ಷೆ ಸಮಯದಲ್ಲಿ ಕೇಂದ್ರ ಸರ್ಕಾರ ಪಶ್ಚಿಮಬಂಗಾಳದ ಜತೆ ಇರುತ್ತೇವೆ. ನಾವು ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಕೆಲಸವನ್ನು ಸಾಧಿಸಬೇಕಾಗಿದೆ ಎಂದು ಪ್ರಧಾನಿ ಹೇಳಿದರು.

- Advertisement -
spot_img

Latest News

error: Content is protected !!