- Advertisement -


- Advertisement -
ಉಡುಪಿ: ಕಾರು ಹಾಗೂ ಬಸ್ ಮಧ್ಯೆ ಅಪಘಾತ ಸಂಭವಿಸಿ ಖ್ಯಾತ ಹುಲಿ ವೇಷದ ಕಲಾವಿದ ಮೃತಪಟ್ಟಿರುವ ಘಟನೆ ರಾಷ್ಟ್ರೀಯ 66 ಬ್ರಹ್ಮಾವರದ ಹೇರೂರು ರೂಡ್ ಸೆಟ್ ಕ್ರಾಸಿಂಗ್ ಬಳಿ ನಡೆದಿದೆ. ಲಕ್ಷ್ಮೀ ನಗರದ ಮಂಜುನಾಥ್ (43) ಮೃತರು.
ಸಂತೆಕಟ್ಟೆ ಲಕ್ಷ್ಮಿನಗರದ ಐದು ಯುವಕರು ಗೋವಾದಲ್ಲಿ ನಡೆದ ಮೀಟಿಂಗ್ ಮುಗಿಸಿ, ಇನ್ನೇನು ಮನೆಗೆ ತಲುಪುವ ಮೊದಲೇ, ರಸ್ತೆ ಅಪಘಾತ ನಡೆದಿದೆ. ಉಡುಪಿಯತ್ತ ತೆರಳುತ್ತಿದ್ದ ವೇಗದೂತ ಬಸ್ಸೊಂದು ದಿಢೀರ್ ಆಗಿ ಬ್ರೇಕ್ ಹಾಕಿದ ಪರಿಣಾಮ, ಇನ್ನೋವಾ ಕಾರು ನಿಯಂತ್ರಣ ತಪ್ಪಿ ಬಸ್ಸಿನ ಹಿಂಬದಿಗೆ ಗುದ್ದಿದೆ. ಪರಿಣಾಮ ಮಂಜುನಾಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಉಳಿದ ನಾಲ್ವರು ಅತ್ಯಲ್ಪ ಗಾಯದಿಂದ ಅಪಾಯದಿಂದ ಪಾರಾಗಿದ್ದಾರೆ.
ಮೃತ ಮಂಜುನಾಥ್ ಖ್ಯಾತ ಹುಲಿ ವೇಷದ ಕಲಾವಿದರಾಗಿದ್ದು, ಕಳೆದ ಹಲವು ವರ್ಷಗಳಿಂದ ಹಲವಾರು ಹುಲಿ ವೇಷಧಾರಿಗಳಿಗೆ ಪೈಂಟಿಂಗ್ ಅನ್ನು ಮಾಡಿದ್ದರು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


