Thursday, May 2, 2024
HomeUncategorizedಕೊರೋನಾ ಸಮಯದಲ್ಲಿ ಯೋಧರಂತೆ ಶ್ರಮಿಸುವ ಪೊಲೀಸರನ್ನು ಅಸ್ಪೃಶ್ಯರಂತೆ ನೋಡಬೇಡಿ: ಉಡುಪಿ ಡಿಸಿ

ಕೊರೋನಾ ಸಮಯದಲ್ಲಿ ಯೋಧರಂತೆ ಶ್ರಮಿಸುವ ಪೊಲೀಸರನ್ನು ಅಸ್ಪೃಶ್ಯರಂತೆ ನೋಡಬೇಡಿ: ಉಡುಪಿ ಡಿಸಿ

spot_img
- Advertisement -
- Advertisement -

ಉಡುಪಿ: ಸದ್ಯ ರಾಜ್ಯದಲ್ಲಿ ಕೊರೋನಾ ಹಾಟ್ ಸ್ಪಾಟ್ ಎನಿಸಿರುವ ಕೃಷ್ಣ ನಗರಿ ಉಡುಪಿಯಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಪೊಲೀಸರು ಯೋಧರಂತೆ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಎಲ್ಲಾ ಪೊಲೀಸರನ್ನು ಅಸ್ಪೃಶ್ಯರಂತೆ ನೋಡಬೇಡಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮನವಿ ಮಾಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಈವರೆಗೆ 9 ಪೊಲೀಸರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಅವರ ಜೊತೆ ಕೆಲಸ ಮಾಡಿದ್ದ ಇತರೇ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇದರಿಂದ ಜಿಲ್ಲೆಯ ಜನತೆ ಪೊಲೀಸರನ್ನು ನೋಡುವ ದೃಷ್ಟಿ ಬದಲಾಗಿತ್ತು.

ಇದೀಗ ಎಲ್ಲಾ 9 ಜನ ಪೊಲೀಸರು ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿದ್ದಾರೆ. ಕೊರೊನಾ ಬಂತು ಅಂತ ಸಾರ್ವಜನಿಕವಾಗಿ ಪೊಲೀಸರನ್ನು ಯಾರೂ ಸಂಶಯದಿಂದ ನೋಡಬಾರದು. ಪೊಲೀಸರು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ಮಾಡುವ ಯೋಧರು, ಪೊಲೀಸರ ಮೇಲೆ ಸಾರ್ವಜನಿಕರಿಗೆ ಹೆಚ್ಚು ಗೌರವ ಬರಬೇಕು ಎಂದು ಜಿಲ್ಲಾಧಿಕಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!