Monday, May 20, 2024
HomeUncategorizedಪ್ರಕಾಶ್‌ ರಾಜ್‌ ಬಿಜೆಪಿಗೆ ಸೇರಲಿದ್ದಾರೆ..!!; ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ವೈರಲ್

ಪ್ರಕಾಶ್‌ ರಾಜ್‌ ಬಿಜೆಪಿಗೆ ಸೇರಲಿದ್ದಾರೆ..!!; ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ವೈರಲ್

spot_img
- Advertisement -
- Advertisement -

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜಕೀಯ ವಿಚಾರದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಬಹುಭಾಷಾ ನಟ ಪ್ರಕಾಶ್‌ ರಾಜ್‌. ಒಂದಲ್ಲ ಒಂದು ವಿಚಾರದಲ್ಲಿ ಅವರು ಕೇಂದ್ರ ಸರ್ಕಾರವನ್ನು ಟೀಕಿಸುತ್ತಲೇ ಇರುತ್ತಾರೆ.

ಇನ್ನು ತಮ್ಮ ಟ್ವೀಟ್‌ ಮೂಲಕವೇ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೇರವಾಗಿಯೇ ಟೀಕಿಸಿದ್ದಾರೆ. ಸೈದ್ಧಾಂತಿಕವಾಗಿ ತನ್ನ ವಿಚಾರಗಳನ್ನು ಹೇಳುವ ಪ್ರಕಾಶ್‌ ಅನೇಕರ ಟೀಕೆಗೂ ಒಳಗಾಗಿದ್ದಾರೆ.

ಆಶ್ಚರ್ಯವೆಂಬಂತೆ ‘ಪ್ರಕಾಶ್‌ ರಾಜ್‌ ಬಿಜೆಪಿಗೆ ಸೇರುತ್ತಾರೆ’ ಎನ್ನುವ ಟ್ವೀಟ್‌ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ʼದಿ ಸ್ಕಿನ್‌ ಡಾಕ್ಟರ್‌ʼ ಎನ್ನುವ ಟ್ವಿಟರ್‌ ಬಳಕೆದಾರರೊಬ್ಬರು ‘ಶ್ರೇಷ್ಠ ನಟ ಪ್ರಕಾಶ್‌ ರಾಜ್‌ ಅವರು ಇಂದು ಬಿಜೆಪಿಗೆ ಸೇರಲಿದ್ದಾರೆʼ ಎನ್ನುವ ಟ್ವೀಟ್‌ ವೊಂದನ್ನು ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಟ್ವೀಟ್‌ ವೈರಲ್‌ ಆಗಿದ್ದು, ಟ್ವೀಟ್‌ ಗೆ ಸ್ವತಃ ಪ್ರಕಾಶ್‌ ರಾಜ್‌ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. “ಅವರು ಪ್ರಯತ್ನಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ ನನ್ನನ್ನು ಖರೀದಿಸುವಷ್ಟು (ಸೈದ್ಧಾಂತಿಕವಾಗಿ) ಅವರು ಶ್ರೀಮಂತರಲ್ಲ ಎಂದು ಅರಿತುಕೊಂಡಿರಬೇಕು.. ನಿಮ್ಮ ಅಭಿಪ್ರಾಯವೇನು ಸ್ನೇಹಿತರೇ” ಎಂದು ಪ್ರಕಾಶ್‌ ರಾಜ್‌ ಬರೆದುಕೊಂಡಿದ್ದಾರೆ.

ಪ್ರಕಾಶ್‌ ರಾಜ್‌ ಈ ಹಿಂದೆ ಚಂದ್ರಯಾನ ಹಾಗೂ ಪ್ರಧಾನಿ ಅವರನ್ನು ಹೋಲಿಸಿಕೊಂಡು ಟ್ವೀಟ್‌ ಮಾಡಿ ಟೀಕೆಗೆ ಗುರಿಯಾಗಿದ್ದರು. ಇದಲ್ಲದೇ ಇತ್ತೀಚೆಗೆ ಪ್ರಧಾನಿ ಅವರು ನವಿಲಿನ ಜೊತೆ ಹಾಕಿದ ಫೋಟೋಗೆ ಹಾಕಿ ಹುಷಾರ್ರಪ್ಪಾ..!!! ಮೊದ್ಲು ಕಾಳಾಕಿ.. ಆಮೇಲೆ ಪುಕ್ಕ ಕಿತ್ಕೊತಾರೆ ಎಂದು ಬರೆದು ಟೀಕಿಸಿದ್ದರು.

- Advertisement -
spot_img

Latest News

error: Content is protected !!