Wednesday, June 3, 2026
Homeಕರಾವಳಿಉಪ್ಪಿನಂಗಡಿ: ಹಿಂದೂ ಯುವಕರ ಮೀನುವ್ಯಾಪಾರಕ್ಕೆ ಪಿಡಿಓ ಅಡ್ಡಿ, ಘಟನೆಯ ಹಿಂದಿದೆಯೇ ಕಾಣದ ಕೈಗಳ ಕೈವಾಡ

ಉಪ್ಪಿನಂಗಡಿ: ಹಿಂದೂ ಯುವಕರ ಮೀನುವ್ಯಾಪಾರಕ್ಕೆ ಪಿಡಿಓ ಅಡ್ಡಿ, ಘಟನೆಯ ಹಿಂದಿದೆಯೇ ಕಾಣದ ಕೈಗಳ ಕೈವಾಡ

- Advertisement -
- Advertisement -

ಉಪ್ಪಿನಂಗಡಿ: ಸ್ಥಳೀಯ ಹಿಂದೂ ಯುವಕ ಅಶೋಕ್ ಶೆಟ್ಟಿ ಎಂಬವರು ಇತ್ತೀಚೆಗೆ ಪೇಟೆಯ ಗಾಂಧಿಪಾರ್ಕ್ ಪರಿಸರದಲ್ಲಿ ಗೂಡ್ಸ್ ರಿಕ್ಷಾವೊಂದರಲ್ಲಿ ಹೊಸದಾಗಿ ಮೀನು ವ್ಯಾಪಾರ ಆರಂಭಿಸಿದ್ದು ಮೀನು ಮಾರಾಟ ಮಾಡುತ್ತಿದ್ದ ವೇಳೆ ಏಕಾಏಕಿಯಾಗಿ ಸ್ಥಳಕ್ಕಾಗಮಿಸಿದ ಉಪ್ಪಿನಂಗಡಿಯ ಪಿಡಿಓ, ಏಕಾಏಕಿ ವಾಹನದ ಕೀ ಪಡೆದು ವ್ಯಾಪಾರಕ್ಕೆ ಅಡ್ಡಿ ನಡೆಸಿ ದರ್ಪ ಮೆರೆದ ಘಟನೆ ವರದಿಯಾಗಿದೆ

ಯಾವುದೇ ಕಾರಣ ನೀಡದೆ ವ್ಯಾಪಾರಕ್ಕೆ ಅಡ್ಡಿಪಡಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಹಿಂದೂ ಯುವಕರು ಜಮಾಯಿಸಿ ಪಿಡಿಓ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ.

ಉಪ್ಪಿನಂಗಡಿಯಲ್ಲಿ ಹಲವಾರು ಮಂದಿ ಮೀನು ವ್ಯಾಪಾರ ನಡೆಸುತ್ತಿದ್ದು ಅವರಿಗೆ ಯಾವುದೇ ರೀತಿಯ ಅಡ್ಡಿಪಡಿಸದೆ ಏಕಪಕ್ಷೀಯ ಧೋರಣೆ ತಳೆದಿರುವುದು ಮತ್ತು ಸ್ಥಳೀಯ ಮೀನು ವ್ಯಾಪಾರಿಯೊಬ್ಬನ ಕುಮ್ಮಕ್ಕಿನಿಂದಲೇ ಪಿಡಿಓ ಅಡ್ಡಿಪಡಿಸಿದ್ದಾರೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

- Advertisement -

Latest News

error: Content is protected !!